ಸಾಂದರ್ಭಿಕ ಚಿತ್ರ  
ಜೀವನಶೈಲಿ

ದೀಪಾವಳಿ ಸಮಯ; ಹಬ್ಬ ಎಂದು ಸಿಹಿತಿಂಡಿ ಹೆಚ್ಚು ತಿನ್ನುತ್ತೀರಾ? ಎಚ್ಚರ!

ಇತ್ತೀಚಿನ ಸಮೀಕ್ಷೆಯ ಪ್ರಕಾರ ನಗರ ಪ್ರದೇಶಗಳ ಭಾರತೀಯರಲ್ಲಿ ಸಿಹಿತಿಂಡಿ ಸೇವನೆ ಹೆಚ್ಚಾಗುತ್ತಿದೆ.

ನವದೆಹಲಿ: ಇತ್ತೀಚಿನ ಜೀವನಶೈಲಿಯಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ದೀಪಾವಳಿ ಹಬ್ಬದ ಸಮಯದಲ್ಲಿ ಸಿಹಿತಿಂಡಿಗಳು, ಚಾಕೊಲೇಟ್‌ಗಳು ಮತ್ತು ಇತರ ಸಕ್ಕರೆ ಪದಾರ್ಥಗಳ ಪ್ಯಾಕೆಟ್ ಹೆಚ್ಚು ಹೆಚ್ಚು ಸಿಗುತ್ತದೆ. ಆದರೆ ಅವುಗಳನ್ನು ಹೆಚ್ಚು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.

ಇತ್ತೀಚಿನ ಸಮೀಕ್ಷೆಯ ಪ್ರಕಾರ ನಗರ ಪ್ರದೇಶಗಳ ಭಾರತೀಯರಲ್ಲಿ ಸಿಹಿತಿಂಡಿ ಸೇವನೆ ಹೆಚ್ಚಾಗುತ್ತಿದೆ. ಕಳೆದ 18 ತಿಂಗಳುಗಳಲ್ಲಿ ಪ್ರತಿ ತಿಂಗಳು ಮೂರು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವವರ ಸಂಖ್ಯೆ ಶೇಕಡಾ 40 ರಷ್ಟು ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಹತ್ತು ಮನೆಗಳಲ್ಲಿ ಏಳು ಮನೆಗಳಲ್ಲಿ ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಬಿಸ್ಕತ್ತುಗಳು ಮತ್ತು ಕೇಕ್‌ಗಳಂತಹ ಪ್ಯಾಕ್ ಮಾಡಿದ ತಿನಿಸುಗಳನ್ನು ಹೆಚ್ಚೆಚ್ಚು ಸೇವಿಸುತ್ತಾರೆ.

ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.43ರಷ್ಟು ಜನರು ತಮ್ಮ ಮನೆಯ ಹೆಚ್ಚಿನ ಸದಸ್ಯರು ಸಕ್ಕರೆಗೆ ವ್ಯಸನಿಯಾಗಿದ್ದಾರೆ ಎಂದು ಒಪ್ಪಿಕೊಂಡರೆ, ಸಕ್ಕರೆ ಸೇವನೆಯ ಬಗ್ಗೆ ಅರಿವು ಹೊಂದಿರುವವರಲ್ಲಿ ಶೇಕಡ 70 ರಷ್ಟು ಜನರಿದ್ದು, ಶೇಕಡ 30 ರಷ್ಟು ಮಂದಿ ಕಡಿಮೆ ಸಕ್ಕರೆ ಇರುವ ಪರ್ಯಾಯಗಳಿಗೆ ಬದಲಾಯಿಸುವುದಾಗಿ ಹೇಳಿದ್ದಾರೆ.

ಮದ್ರಾಸ್ ಮಧುಮೇಹ ಸಂಶೋಧನಾ ಪ್ರತಿಷ್ಠಾನದ (MDRF) ಅಧ್ಯಕ್ಷ ಡಾ. ವಿ. ಮೋಹನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯಿಸಿ, ದೀಪಾವಳಿ ಸಮಯದಲ್ಲಿ ಮಧುಮೇಹಿಗಳಲ್ಲಿ ಸಕ್ಕರೆ ಮಟ್ಟದಲ್ಲಿ ಆಗಾಗ್ಗೆ ಏರಿಕೆಯನ್ನು ಉಂಟುಮಾಡುತ್ತದೆ ಎಂದು ಹೇಳುತ್ತಾರೆ. ದೀಪಾವಳಿ ಸಮಯದಲ್ಲಿ ಸಿಹಿತಿಂಡಿಗಳನ್ನು ತಿನ್ನುವ ಅಭ್ಯಾಸ ಹೆಚ್ಚಿರುತ್ತದೆ. ಮಧುಮೇಹ ಈ ಸಮಯದಲ್ಲಿ ಹೆಚ್ಚಾಗದಂತೆ ತಡೆಯಬೇಕೆಂದರೆ ಸೇವಿಸುವ ಸಿಹಿತಿಂಡಿಗಳ ಪ್ರಮಾಣವನ್ನು ಮಿತಿಗೊಳಿಸುವುದು. ಪ್ರತಿ ಹಬ್ಬದಲ್ಲೂ ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ, ಅದು ಖಂಡಿತವಾಗಿಯೂ ಈ ದೇಶದಲ್ಲಿ ಮಧುಮೇಹ ಮತ್ತು ಪೂರ್ವ-ಮಧುಮೇಹ ಹರಡುವಿಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಲೋಕಲ್ ಸರ್ಕಲ್ಸ್ 2025 ಸಮೀಕ್ಷೆಯ ಪ್ರಕಾರ, ನಗರ ಪ್ರದೇಶಗಳಲ್ಲಿ ಶೇ. 74 ರಷ್ಟು ಜನರು ತಿಂಗಳಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಸೇವಿಸುತ್ತಾರೆ. ಹಬ್ಬದ ಅವಧಿಯಲ್ಲಿ ಇದರ ಬಳಕೆ ಹೆಚ್ಚಾಗಿರುತ್ತದೆ. ಐದು ಪ್ರತಿಶತದಷ್ಟು ಜನರು ಪ್ರತಿದಿನ ಸಕ್ಕರೆ ಸೇವಿಸುತ್ತಾರೆ ಎಂದು ಹೇಳಿದರೆ, ಶೇ. 26 ರಷ್ಟು ಜನರು ತಿಂಗಳಿಗೆ 15-30 ಬಾರಿ ಸೇವಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಜನರು ಇತ್ತೀಚೆಗೆ ಸಿಹಿತಿಂಡಿಗಳ ಬದಲಿಗೆ ಡ್ರೈಫ್ರೂಟ್ಸ್ ಗಳನ್ನು ಉಡುಗೊರೆಯಾಗಿ ನೀಡಲು ಪ್ರಾರಂಭಿಸಿದ್ದಾರೆ ಎಂದು ಡಾ. ಮೋಹನ್ ಹೇಳುತ್ತಾರೆ. ಉಪ್ಪುರಹಿತ ಬೀಜಗಳು ಹೊಟ್ಟೆ ತುಂಬುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. ಹಬ್ಬದ ಸಮಯದಲ್ಲಿ ದಿನಕ್ಕೆ ಒಂದೆರಡು ತುಂಡು ಸಿಹಿತಿಂಡಿ ಸೇವಿಸಿ ಹೆಚ್ಚು ಬೇಡ ಎಂದರು.

ಲೋಕಲ್ ಸರ್ಕಲ್ಸ್‌ನ ಸಂಸ್ಥಾಪಕ ಸಚಿನ್ ತಪರಿಯಾ, ಹಬ್ಬದ ಸಮಯದಲ್ಲಿ ಎಚ್ಚರಿಕೆ ವಹಿಸಬೇಕೆನ್ನುತ್ತಾರೆ. ಭಾರತೀಯರಲ್ಲಿ ಸಕ್ಕರೆ ಸೇವನೆ ಹೆಚ್ಚುತ್ತಿದ್ದರೂ, ಹೆಚ್ಚಿನ ಸಕ್ಕರೆ, ಬೀಜದ ಎಣ್ಣೆಗಳು ಮತ್ತು ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಬೊಜ್ಜು ಸಮಸ್ಯೆಗಳ ನಡುವಿನ ಸಂಬಂಧದ ಬಗ್ಗೆ ಜಾಗೃತಿ ಜನರಲ್ಲಿ ಅಷ್ಟೊಂದು ಇಲ್ಲ. ಹೆಚ್ಚುವರಿ ಸೇವನೆಯನ್ನು ತಡೆಯಲು ಉದ್ಯಮವು ಕಡಿಮೆ ಸಕ್ಕರೆ ಉತ್ಪನ್ನಗಳನ್ನು ಒದಗಿಸಬೇಕು ಎನ್ನುತ್ತಾರೆ ಅವರು.

2023 ರ ICMR-INDIAB ಅಧ್ಯಯನ ಪ್ರಕಾರ, 2021 ರಲ್ಲಿ ಭಾರತದಲ್ಲಿ ಅಂದಾಜು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 136 ಮಿಲಿಯನ್ ಪೂರ್ವ-ಮಧುಮೇಹ ರೋಗಿಗಳು ಮತ್ತು 315 ಮಿಲಿಯನ್ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. MDRF ಈ ಅಧ್ಯಯನವನ್ನು ICMR ಸಹಯೋಗದೊಂದಿಗೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲು ನಿವಾಸದ ಹೊರಗೆ ಹೈಡ್ರಾಮ: 'ನನ್ನ ಕಥೆ ಮುಗಿಯಿತು' ಬಟ್ಟೆ ಹರಿದುಕೊಂಡು ಗೋಳಾಡಿದ RJD ಟಿಕೆಟ್ ಆಕಾಂಕ್ಷಿ! Video

ಬೆಳಗಾವಿ 'ಡಿಸಿಸಿ ಬ್ಯಾಂಕ್' ಚುನಾವಣೆ: ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಮಾರಾಮಾರಿ!

"ನನಗೆ ಬೇಕಿರುವುದು ಅದೊಂದೆ...": ರಷ್ಯಾ-ಯುಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಗೆ ಪುತಿನ್ ಷರತ್ತು; ಈಡೇರುತ್ತಾ 11 ವರ್ಷಗಳ ಗುರಿ?

'ಬೆಂಗಳೂರು ಮೂಲಸೌಕರ್ಯದ ಬಗ್ಗೆ ಟೀಕೆಗಳಿಗೆ ಸ್ವಾಗತ, ಆದರೆ ಕೆಲವರು ಅದನ್ನು ಅತಿಯಾಗಿ ಮಾಡುತ್ತಿದ್ದಾರೆ'

ಕಲ್ಲು ಕ್ವಾರಿಯಿಂದ ಮುತ್ತುಗಳವರೆಗೆ: ಪಾಳುಬಿದ್ದ ಸ್ಥಳದಲ್ಲೀಗ ಲಕ್ಷಗಟ್ಟಲೆ ಆದಾಯ ಕಂಡುಕೊಂಡ ಗದಗ ಯುವಕರು!

SCROLL FOR NEXT