ಸಾಂದರ್ಭಿಕ ಚಿತ್ರ  
ಜೀವನಶೈಲಿ

ಉದ್ಯೋಗ ಶೈಲಿ, ವಾಹನಗಳಲ್ಲಿ ಅಧಿಕ ಪ್ರಯಾಣ: ನಗರ ಪ್ರದೇಶದ ಜನರಲ್ಲಿ ಬೊಜ್ಜಿನ ಸಮಸ್ಯೆಗೆ ಇದೂ ಕೂಡ ಕಾರಣ!

Nature-Scientific Reports ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ದೇಶದಾದ್ಯಂತ ಜನರು ಹೊಟ್ಟೆಯ ಸುತ್ತಲಿನ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭೌಗೋಳಿಕತೆ ಮತ್ತು ಲಿಂಗದ ಆಧಾರದ ಮೇಲೆ ಸ್ಪಷ್ಟವಾದ ವ್ಯತ್ಯಾಸಗಳು ಕಂಡುಬರುತ್ತಿವೆ.

ನವದೆಹಲಿ: ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳು ಪುರುಷರು ಮತ್ತು ಮಹಿಳೆಯರಲ್ಲಿ ಹೊಟ್ಟೆ ಸುತ್ತಲಿನ ಕೊಬ್ಬು (Abdominal Obesity) ಹೆಚ್ಚಾಗುತ್ತಿರುವ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ ಎಂದು ದೇಶವ್ಯಾಪಿ ಅಧ್ಯಯನ ತಿಳಿಸಿದೆ. ದೀರ್ಘಕಾಲ ಕುಳಿತು ಮಾಡುವ ಕೆಲಸಗಳು, ವಾಹನಗಳ ಮೇಲೆ ಅವಲಂಬನೆ ಮತ್ತು ಪ್ಯಾಕೇಜ್ಡ್ ಆಹಾರಗಳ ಸುಲಭ ಲಭ್ಯತೆ ತೂಕ ಹೆಚ್ಚುವಿಕೆಗೆ ಕಾರಣವಾಗುತ್ತಿದೆ ಎಂದು ಅಧ್ಯಯನ ಹೇಳಿದೆ.

Nature-Scientific Reports ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ದೇಶದಾದ್ಯಂತ ಜನರು ಹೊಟ್ಟೆಯ ಸುತ್ತಲಿನ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭೌಗೋಳಿಕತೆ ಮತ್ತು ಲಿಂಗದ ಆಧಾರದ ಮೇಲೆ ಸ್ಪಷ್ಟವಾದ ವ್ಯತ್ಯಾಸಗಳು ಕಂಡುಬರುತ್ತಿವೆ.

2019-2021ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5)ಯ 707 ಜಿಲ್ಲೆಗಳ ಏಳು ಲಕ್ಷಕ್ಕೂ ಹೆಚ್ಚು ಜನರ ಮಾಹಿತಿಯ ಆಧಾರದ ಮೇಲೆ ನಡೆಸಿದ ಅಧ್ಯಯನವು, ಭಾರತದಲ್ಲಿ 15ರಿಂದ 49 ವರ್ಷದ ಮಹಿಳೆಯರಲ್ಲಿ 56.6 ಶೇಕಡಾ ಮತ್ತು 15-54 ವರ್ಷದ ಪುರುಷರಲ್ಲಿ 48.9 ಶೇಕಡಾ ಜನರಿಗೆ ಹೊಟ್ಟೆ ಸುತ್ತಲಿನ ಕೊಬ್ಬು ಇರುವುದನ್ನು ಬಹಿರಂಗಪಡಿಸಿದೆ. ಇದು ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಂತಹ ಅನಾರೋಗ್ಯಗಳ ಹೆಚ್ಚಳಕ್ಕೆ ಕಾರಣವಾಗುತ್ತಿವೆ.

ದೆಹಲಿ ಮೂಲದ ಹೆಲ್ತ್ ಸಿಸ್ಟಮ್ಸ್ ಟ್ರಾನ್ಸ್‌ಫಾರ್ಮೇಷನ್ ಪ್ಲಾಟ್‌ಫಾರ್ಮ್ ಸಂಶೋಧಕರು ನಡೆಸಿದ ಈ ಅಧ್ಯಯನವು ಪ್ರಾಂತ್ಯವಾರು ದೊಡ್ಡ ವ್ಯತ್ಯಾಸಗಳನ್ನು ತೋರಿಸಿದೆ. ಪಂಜಾಬ್, ಹರಿಯಾಣ, ಉತ್ತರಾಖಂಡ, ಜಮ್ಮು-ಕಾಶ್ಮೀರ ಮತ್ತು ದೆಹಲಿಯಲ್ಲಿ ಪುರುಷರು ಹಾಗೂ ಮಹಿಳೆಯರಲ್ಲಿ ಹೊಟ್ಟೆಯ ಸುತ್ತಲ ಬೊಜ್ಜಿನ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಆದರೆ ಮಧ್ಯ ಭಾರತದಲ್ಲಿ ಚಿತ್ರಣ ಸಂಪೂರ್ಣವಾಗಿ ಭಿನ್ನವಾಗಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹೊಟ್ಟೆ ಕೊಬ್ಬಿನ ಪ್ರಮಾಣ ಕಡಿಮೆಯಾಗಿದೆ. ನಗರೀಕರಣ ಮತ್ತು ಜೀವನಶೈಲಿ ಬದಲಾವಣೆಗಳಿಂದ ಈ ಪ್ರದೇಶಗಳಲ್ಲೂ ಭವಿಷ್ಯದಲ್ಲಿ ಇದೇ ಸ್ಥಿತಿ ಉಂಟಾಗಬಹುದು ಎಂದು ಅಧ್ಯಯನ ಎಚ್ಚರಿಸಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ಕೊಬ್ಬು ಮತ್ತು ಸಂಸ್ಕರಿತ ಕಾರ್ಬೋಹೈಡ್ರೇಟ್‌ಗಳ ಅಧಿಕ ಸೇವನೆ, ಜೊತೆಗೆ ದೈಹಿಕ ಪರಿಶ್ರಮ ಕಡಿಮೆಯಾಗಿರುವುದು ಮುಖ್ಯ ಕಾರಣವಾಗಿದೆ. ಯಾಂತ್ರೀಕೃತ ಜೀವನಶೈಲಿ ಮತ್ತು ಕಚೇರಿಯಲ್ಲಿ ಕುಳಿತು ಮಾಡುವ ಕೆಲಸಗಳ ಹೆಚ್ಚಳ ಇದಕ್ಕೆ ಕಾರಣವಾಗಿದೆ. ಕೆಲವು ಸಮುದಾಯಗಳ ಜನರಲ್ಲಿ ದೇಹದ ಗಾತ್ರ ದೊಡ್ಡದಿರುವುದನ್ನು ಸಮೃದ್ಧಿಯ ಸಂಕೇತವಾಗಿ ಕಾಣಲಾಗುತ್ತದೆ.

ಪೂರ್ವ ಭಾರತದಲ್ಲಿ ಚಿತ್ರಣ ಭಿನ್ನವಾಗಿದೆ. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಜನರ ಬಡತನ ಮತ್ತು ಅಪೌಷ್ಟಿಕತೆಯ ಕಾರಣದಿಂದ ಹೊಟ್ಟೆ ಕೊಬ್ಬಿನ ಪ್ರಮಾಣ ಕಡಿಮೆಯಿದೆ. ಆದರೆ ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಗರ ಪ್ರದೇಶಗಳಲ್ಲಿ ಇದು ಹೆಚ್ಚುತ್ತಿರುವುದು ಕಂಡುಬರುತ್ತಿದೆ.

ಅಪೌಷ್ಟಿಕತೆ ಮತ್ತು ಅತಿಯಾದ ತೂಕ ಒಂದೇ ಪ್ರದೇಶದಲ್ಲಿ ಇರುವುದು ಭಾರತದ ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಲಿಂಗದ ಆಧಾರದ ಮೇಲೂ ವ್ಯತ್ಯಾಸ ಕಂಡುಬಂದಿದೆ. ಕೇರಳದಂತಹ ದಕ್ಷಿಣ ರಾಜ್ಯಗಳಲ್ಲಿ ಮಹಿಳೆಯರಲ್ಲಿ ಹೊಟ್ಚೆಯ ಸುತ್ತಲಿನ ಬೊಜ್ಜು ಹೆಚ್ಚು ಕಂಡುಬರುತ್ತದೆ, ಆದರೆ ತೆಲಂಗಾಣ ಮತ್ತು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಪುರುಷರಲ್ಲಿ ಇದರ ಪ್ರಮಾಣ ಹೆಚ್ಚು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಶ್ವೇತಭವನ ಬಳಿ ಮತ್ತೆ ಗುಂಡಿನ ದಾಳಿ: ಪ್ರತಿದಾಳಿಗೆ ಬಂದೂಕುಧಾರಿ ಸಾವು-Video

ಯುದ್ಧ ಕೊನೆಗೊಳಿಸುವ ಗುರಿ: ಒಪ್ಪಂದಕ್ಕೆ ಸನಿಹದಲ್ಲಿ ಇರಾನ್-ಅಮೆರಿಕ!

Cockroach Janta Party ಬೆಳವಣಿಗೆ ಸಾರ್ವಜನಿಕ ಸಂಕಷ್ಟ ತೋರುತ್ತದೆ: ಪ್ರಶಾಂತ್ ಕಿಶೋರ್

ಆನೇಕಲ್‌ನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕ್ರಿಕೆಟ್ ಕ್ರೀಡಾಂಗಣದಿಂದ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ

ನನ್ನನ್ನು ಕ್ರೂರ ಸರ್ವಾಧಿಕಾರಿ ಅನ್ನಿ, ಆದ್ರೆ 'ಗುಗ್ಗು' ಅಂತ ಮಾತ್ರ ಹೇಳಬೇಡಿ: ಡೊನಾಲ್ಡ್ ಟ್ರಂಪ್

SCROLL FOR NEXT