ಸಂಗ್ರಹ ಚಿತ್ರ 
ಜೀವನಶೈಲಿ

ಸೀಸನ್ ಬದಲಾದಾಗ ದೇಹಕ್ಕೆ ಅತ್ಯಗತ್ಯ ರಿಫ್ರೆಶ್'ಮೆಂಟ್: Body ಡಿಟಾಕ್ಸ್‌ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು..

ಮನೆಯಲ್ಲಿ ಧೂಳು, ಕಸದ ಸಂಗ್ರಹವಾಗುವಂತೆ, ನಮ್ಮ ದೇಹದಲ್ಲೂ ಕಾಲಕ್ರಮೇಣ ವಿಷಪದಾರ್ಥಗಳು, ಮೃತಕೋಶಗಳು (dead cells) ಸಂಗ್ರಹವಾಗುತ್ತವೆ. ಹವಾಮಾನ ಬದಲಾವಣೆ, ಆಹಾರ ಪದ್ಧತಿ, ಒತ್ತಡ ಮತ್ತು ಜೀವನಶೈಲಿಯ ಪರಿಣಾಮವಾಗಿ ದೇಹದ ಸ್ವಾಭಾವಿಕ ಸಮತೋಲನ ಕುಗ್ಗುತ್ತದೆ.

ಋತು ಬದಲಾವಣೆ ನಮ್ಮ ಜೀವನಶೈಲಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ವಿಶೇಷವಾಗಿ ವಸಂತ ಋತು (Spring Season) ಈ ಋತುವು ಚಳಿಗಾಲ ಮತ್ತು ಬೇಸಿಗೆಯ ನಡುವೆ ಬರುವ ಕಾಲವಾಗಿದೆ. ಈ ಋತು ಬಂದಾಗ ಪ್ರಕೃತಿ ತನ್ನಲ್ಲಿನ ಹೊಸ ಚೈತನ್ಯವನ್ನು ತೋರಿಸುತ್ತದೆ. ಮರಗಳು ಹಸಿರಾಗುತ್ತವೆ, ಹೂಗಳು ಅರಳುತ್ತವೆ, ವಾತಾವರಣದಲ್ಲಿ ಹೊಸತನ ಮೂಡುತ್ತದೆ. ಇದೇ ಸಮಯದಲ್ಲಿ ನಾವು ಸಹ ನಮ್ಮ ಮನೆಯನ್ನು ಸ್ವಚ್ಛಗೊಳಿಸಲು, ಅನಗತ್ಯ ವಸ್ತುಗಳನ್ನು ತೊಡೆದುಹಾಕಲು ಮತ್ತು ಹೊಸತನವನ್ನು ಬರಮಾಡಿಕೊಳ್ಳಲು ಮುಂದಾಗುತ್ತೇವೆ.

ಆದರೆ, ಮುಖ್ಯವಾದ ಮನೆ—ಅಂದರೆ ನಮ್ಮದೇ ದೇಹ, ಚರ್ಮ ಮತ್ತು ಕೂದಲು—ಇವುಗಳ ಕಡೆ ಗಮನ ಹರಿಸುವುದನ್ನು ಮರೆತುಬಿಡುತ್ತೇವೆ. ಹೀಗೆಯೇ ಮನೆಯಲ್ಲಿ ಧೂಳು, ಕಸದ ಸಂಗ್ರಹವಾಗುವಂತೆ, ನಮ್ಮ ದೇಹದಲ್ಲೂ ಕಾಲಕ್ರಮೇಣ ವಿಷಪದಾರ್ಥಗಳು, ಮೃತಕೋಶಗಳು (dead cells) ಸಂಗ್ರಹವಾಗುತ್ತವೆ. ಹವಾಮಾನ ಬದಲಾವಣೆ, ಆಹಾರ ಪದ್ಧತಿ, ಒತ್ತಡ ಮತ್ತು ಜೀವನಶೈಲಿಯ ಪರಿಣಾಮವಾಗಿ ದೇಹದ ಸ್ವಾಭಾವಿಕ ಸಮತೋಲನ ಕುಗ್ಗುತ್ತದೆ.

ಚಳಿಗಾಲದ ನಂತರ ದೇಹದಲ್ಲಿ ಮಂದಗತಿ, ಜೀರ್ಣಕ್ರಿಯೆಯಲ್ಲಿ ಕುಂಠಿತತೆ, ಚರ್ಮದ ಒಣಗುವುದು ಮತ್ತು ಕೂದಲಿನಲ್ಲಿ ಜೀವಾಳ ಕಡಿಮೆಯಾಗುವುದು ಸಾಮಾನ್ಯ. ಆದ್ದರಿಂದ ವಸಂತ ಕಾಲವು ಕೇವಲ ಹೊರಗಿನ ಸ್ವಚ್ಛತೆಗೆ ಮಾತ್ರವಲ್ಲ, ಒಳಗಿನ ಶುದ್ಧೀಕರಣಕ್ಕೂ ಅತ್ಯುತ್ತಮ ಸಮಯವಾಗಿದೆ. ಈ ಕಾಲದಲ್ಲಿ ಸೌಮ್ಯ ಮತ್ತು ನೈಸರ್ಗಿಕ ವಿಧಾನಗಳ ಮೂಲಕ ದೇಹವನ್ನು ಡಿಟಾಕ್ಸ್ ಮಾಡಿ, ಪುನಃ ಚೈತನ್ಯವನ್ನು ತರಬಹುದು.

ದೇಹ ಡಿಟಾಕ್ಸ್ ಮಾಡುವ ಸರಳ ವಿಧಾನಗಳು...

ಬೆಳಗಿನ ಡಿಟಾಕ್ಸ್ ಪಾನೀಯ (Morning Detox Elixir)

ಬೆಚ್ಚಗಿನ ನೀರಿಗೆ ಅರ್ಧ ಲಿಂಬೆ ರಸ, ಒಂದು ಚಮಚ ಜೇನು ಮತ್ತು ಸ್ವಲ್ಪ ದಾಲ್ಚಿನ್ನಿ ಸೇರಿಸಿ ಕುಡಿಯಿರಿ. ಇದು ಜೀರ್ಣಕ್ರಿಯೆ ಸುಧಾರಿಸಲು, ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಮೆಟಾಬಾಲಿಸಂ ಚುರುಕುಗೊಳಿಸಲು ಸಹಕಾರಿಯಾಗುತ್ತದೆ.

ಸಂಗ್ರಹ ಚಿತ್ರ

ದನಿಯಾ-ಜೀರಿಗೆ ನೀರು

ದನಿಯಾ ಬೀಜ ಮತ್ತು ಜೀರಿಗೆ ಕುದಿಸಿ ಕುಡಿಯುವುದು ದೇಹದ ಊತ ಕಡಿಮೆ ಮಾಡಿ, ವಿಷ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಗ್ರೀನ್ ರಿಸೆಟ್ ಸ್ಮೂಥಿ

ಪಾಲಕ್, ಸೌತೆಕಾಯಿ, ಪುದೀನಾ, ಶುಂಠಿ ಮತ್ತು ಎಳನೀರು ಮಿಶ್ರಣ ಮಾಡಿ ಕುಡಿಯುವುದು ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ದೇಹವನ್ನು ಒಳಗಿನಿಂದರೂ ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ತಾಪಮಾನ ಏರಿಕೆಯಾಗುತ್ತಿದ್ದಂತೆ ಚರ್ಮ ಹೆಚ್ಚು ತೈಲ (oil) ಉತ್ಪಾದಿಸಲು ಆರಂಭಿಸುತ್ತದೆ, ಚಳಿಗಾಲದಲ್ಲಿ ಕಾಂತಿ ಕಳೆದುಕೊಂಡಿರುವ ಚರ್ಮ ಹಾಗೆಯೇ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ಚರ್ಮದ ಆರೈಕೆಗೆ ಎಕ್ಸ್‌ಫೋಲಿಯೇಷನ್ (ಮೃತಕಣಗಳನ್ನು ತೆಗೆಯುವುದು) ಮತ್ತು ಹೈಡ್ರೇಷನ್ (ತೇವಾಂಶ ಕಾಪಾಡುವುದು) ಅತ್ಯಂತ ಮುಖ್ಯ.

ಚರ್ಮದ ಆರೈಕೆ: ಹೊಳಪು ಮತ್ತು ತಾಜಾತನಕ್ಕಾಗಿ

ಉಬ್ಟನ್ ರಿನ್ಯೂವಲ್ ಸ್ಕ್ರಬ್

2 ಟೇಬಲ್ ಸ್ಪೂನ್ ಕಡಲೆ ಹಿಟ್ಟು, 1 ಚಮಚ ಸ್ಯಾಂಡಲ್ ವುಡ್ ಪೌಡರ್, ಒಂದು ಚಿಟಿಕೆ ಅರಿಶಿಣ ಮತ್ತು ಅಗತ್ಯವಿರುವಷ್ಟು ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.

ಈ ಮಿಶ್ರಣವನ್ನು ತೇವವಾದ ಚರ್ಮದ ಮೇಲೆ ಸೌಮ್ಯವಾಗಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಸತ್ತ ಚರ್ಮಕಣಗಳನ್ನು ತೆಗೆದುಹಾಕಿ, ಮುಖದ ಕಾಂತಿಯನ್ನು ಹೆಚ್ಚಿಸಿ, ಚರ್ಮದ ತಿರುಳು (texture) ಸುಧಾರಿಸಲು ಸಹಾಯ ಮಾಡುತ್ತದೆ.

ಸಂಗ್ರಹ ಚಿತ್ರ

ಜೇನುತುಪ್ಪ-ಅಲೋವೆರಾ ಮಾಸ್ಕ್

1 ಚಮಚ ಅಲೋವೆರಾ ಜೆಲ್'ಗೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಈ ಮಾಸ್ಕ್ ಚರ್ಮವನ್ನು ತಾಜಾವಾಗಿಸಿ, ತೇವಾಂಶ ನೀಡುವುದರ ಜೊತೆಗೆ ಋತುಬದಲಾವಣೆಯಿಂದ ಉಂಟಾಗುವ ಒಣತನವನ್ನು ಕಡಿಮೆ ಮಾಡಿ, ಚರ್ಮದ ಮೃದುವಾಗುವಿಕೆ (suppleness) ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.

ಗುಲಾಬಿ-ಸೌತೆಕಾಯಿ ಟೋನರ್

ಸೌತೆಕಾಯಿ ರಸವನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಇಡಿ. ಇದನ್ನು ಸ್ಪ್ರೇ ರೀತಿ ಬಳಕೆ ಮಾಡಬಹುದು. ಇದು ಉರಿಯೂತವನ್ನು ಶಮನಗೊಳಿಸುವುದು ಮತ್ತು ಹೊಳಪು ಕಳೆದುಕೊಂಡ ಚರ್ಮಕ್ಕೆ ತಾಜಾತನ ನೀಡಲು ಸಹಾಯ ಮಾಡುತ್ತದೆ.

ಕೂದಲಿನ ಆರೈಕೆ

ಚಳಿಗಾಲದ ನಂತರ ಕೂದಲು ಒಣಗುವುದು, ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಡಿಟಾಕ್ಸ್ ಮತ್ತು ಪೋಷಣೆಯ ಮೂಲಕ ಅದನ್ನು ಪುನಃ ಚೈತನ್ಯಗೊಳಿಸಬಹುದು.

ಹರ್ಬಲ್ ರಿನ್ಸ್

ಬೇವಿನ ಎಲೆ ಮತ್ತು ತುಳಸಿ ಎಲೆಗಳನ್ನು ನೀರಲ್ಲಿ ಕುದಿಸಿ, ತಣ್ಣಗಾದ ನಂತರ ಶಾಂಪು ಆದ ಬಳಿಕ ಕೊಲೆಯಲ್ಲಿ ಕೂದಲನ್ನು ಈ ನೀರಿನಿಂದ ತೊಳೆಯಿರಿ.

ಈ ಹರ್ಬಲ್ ರಿನ್ಸ್ ತಲೆಚರ್ಮವನ್ನು ಶುದ್ಧಗೊಳಿಸಿ, ತಲೆಹೊಟ್ಟೆ (dandruff) ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಬೆಳವಣಿಗೆಗೆ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸ್ಕಾಲ್ಪ್ ಡಿಟಾಕ್ಸ್ ಮಾಸ್ಕ್

2 ಚಮಚ ಮುಲ್ತಾನಿ ಮಿಟ್ಟಿಗೆ ಮೊಸರು ಮತ್ತು ಕೆಲವು ಹನಿಗಳಷ್ಟು ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಚರ್ಮದ ಮೇಲೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಂಡು, ತಲೆಚರ್ಮವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ.

ಸಂಗ್ರಹ ಚಿತ್ರ

ಎಣ್ಣೆ ಮಸಾಜ್

ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದಕ್ಕೆ ಕರಿಬೇವು ಎಲೆಗಳು ಮತ್ತು ಒಂದು ಚಿಟಿಕೆ ಮೆಂತ್ಯೆ ಕಾಳು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ನಂತರ ತಣ್ಣಗಾದ ಮೇಲೆ ತಲೆಚರ್ಮಕ್ಕೆ ಸೌಮ್ಯವಾಗಿ ಮಸಾಜ್ ಮಾಡಿ ರಾತ್ರಿ ಪೂರ್ತಿ ಇಡಿ.

ಈ ತೈಲ ಮಿಶ್ರಣ ಕೂದಲಿನ ಬೇರುಗಳನ್ನು ಬಲಪಡಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಕೂದಲಿಗೆ ಸಹಜ ಹೊಳಪು ಮತ್ತು ಮೃದುತ್ವವನ್ನು ಮರಳಿ ತರಲು ಸಹಾಯ ಮಾಡುತ್ತದೆ.

ಯಾವುದೇ ಸೌಂದರ್ಯವೂ ತಕ್ಷಣ ಸಿಗುವುದಿಲ್ಲ. ಅದು ನಿಯಮಿತ ಆರೈಕೆ, ಸರಿಯಾದ ಆಹಾರ ಮತ್ತು ಮನಸ್ಸಿನ ಶಾಂತಿಯಿಂದ ಬರುತ್ತದೆ. ವಸಂತ ಕಾಲದಲ್ಲಿ ದೇಹವನ್ನು ಶುದ್ಧಗೊಳಿಸುವುದು ಅಂದರೆ ಕಠಿಣ ಡಿಟಾಕ್ಸ್ ಮಾಡುವುದಲ್ಲ, ಸೌಮ್ಯವಾಗಿ ದೇಹವನ್ನು ಪೋಷಿಸಬೇಕು. ಮನೆಗಳನ್ನು ಸ್ವಚ್ಛಗೊಳಿಸದಂತೆ ನಮ್ಮ ದೇಹಕ್ಕೂ ಹೊಸ ಶಕ್ತಿ, ತಾಜಾತನ ಬೇಕಾಗುತ್ತದೆ. ಹೀಗಾಗಿ ದೇಹವನ್ನೂ ಆಗಾಗ್ಗೆ ಡಿಟಾಕ್ಸ್ ಮಾಡಿ, ಪೋಷಿಸಿ. ಆಗ ನೀವು ಕೇವಲ ಚೆನ್ನಾಗಿ ಕಾಣುವುದಷ್ಟೇ ಅಲ್ಲ, ಆರೋಗ್ಯಕರವಾಗಿಯೂ ಇರುತ್ತೀರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

ಕಾಳಿ ಮಾತೆಯ ಬಣ್ಣ ಕಪ್ಪು: ಪ್ರಧಾನಿ ನರೇಂದ್ರ ಮೋದಿಯ 'ಕಾಲ ಟಿಕಾ' ಟೀಕೆ ವಿರುದ್ಧ ಕನ್ನಿಮೋಳಿ ಆಕ್ರೋಶ!

ಇನ್ಮುಂದೆ ನೇಚರ್ ಗೈಡ್, GPS ವಾಕಿಟಾಕಿ ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶವಿಲ್ಲ: SOP ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ!

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿ

SCROLL FOR NEXT