ಸಂಗ್ರಹ ಚಿತ್ರ 
ಜೀವನಶೈಲಿ

ಹಲ್ಲುಗಳನ್ನು ಕಾಪಾಡಿಕೊಳ್ಳುವುದು ಹೇಗೆ? 3-3-3 ಕೊರಿಯನ್ ಬ್ರಷಿಂಗ್ ವಿಧಾನದ ಬಗ್ಗೆ ಎಷ್ಟು ಗೊತ್ತು..?

ಇತ್ತೀಚಿನ ವರ್ಷಗಳಲ್ಲಿ ಕೊರಿಯನ್ ಸಂಸ್ಕೃತಿ ಕೇವಲ ಚರ್ಮದ ಆರೈಕೆ, ಆಹಾರ ಪದ್ಧತಿ, ಫ್ಯಾಷನ್ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಜನರ ದಿನನಿತ್ಯದ ಜೀವನಶೈಲಿಯ ಮೇಲೂ ಪ್ರಭಾವ ಬೀರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕೊರಿಯನ್ ಸಂಸ್ಕೃತಿ ಕೇವಲ ಚರ್ಮದ ಆರೈಕೆ, ಆಹಾರ ಪದ್ಧತಿ, ಫ್ಯಾಷನ್ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಜನರ ದಿನನಿತ್ಯದ ಜೀವನಶೈಲಿಯ ಮೇಲೂ ಪ್ರಭಾವ ಬೀರುತ್ತಿದೆ.

ಈ ನಿಟ್ಟಿನಲ್ಲಿ ಗಮನ ಸೆಳೆಯುತ್ತಿರುವ ಮತ್ತೊಂದು ಆರೋಗ್ಯಕರ ಅಭ್ಯಾಸವೆಂದರೆ, ಕೊರಿಯನ್ 3-3-3 ಬ್ರಷಿಂಗ್ ವಿಧಾನ. ಈ ವಿಧಾನವು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ರೂಪುಗೊಂಡಿರುವ ವೈಜ್ಞಾನಿಕ ವಿಧಾನವಾಗಿದೆ.

ಈ ವಿಧಾನದಲ್ಲಿ ದಿನಕ್ಕೆ ಮೂರು ಬಾರಿ ಹಲ್ಲುಗಳನ್ನು ಕ್ಲೀನ್ ಮಾಡುವಂತೆ ಸೂಚಿಸಲಾಗುತ್ತದೆ. ಪ್ರತಿ ಊಟದ ಮೂರು ನಿಮಿಷಗಳ ನಂತರ, ಹಲ್ಲುಗಳನ್ನು ಮೂರು ನಿಮಿಷಗಳ ಕಾಲ ಬ್ರಷ್ ಮಾಡಬೇಕು.

ಇದನ್ನು ಕೊರಿಯನ್ ಜನರ ಆರೋಗ್ಯಕರ ಜೀವನಶೈಲಿಯ ಒಂದು ಅವಿಭಾಜ್ಯ ಭಾಗವಾಗಿ ನೋಡಲಾಗುತ್ತದೆ. ಇದರ ಮುಖ್ಯ ಉದ್ದೇಶ ದಂತ ಮತ್ತು ವಸಡಿನ (ಗಮ್) ರೋಗಗಳನ್ನು ತಡೆಗಟ್ಟುವುದಾಗಿದೆ.

ವೈಜ್ಞಾನಿಕ ಅಧ್ಯಯನ ಏನು ಹೇಳುತ್ತದೆ?

2012ರಿಂದ 2014ರ ಅವಧಿಯಲ್ಲಿ ಕೊರಿಯನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (KCDC) ಮತ್ತು ಆರೋಗ್ಯ ಹಾಗೂ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕ್ರಾನಿಕ್ ಡಿಸೀಸ್ ಸರ್ವೇಲೆನ್ಸ್ ವಿಭಾಗವು ದೊಡ್ಡ ಮಟ್ಟದ ಅಧ್ಯಯನವನ್ನು ನಡೆಸಿತು.

ಕೊರಿಯನ್ ನ್ಯಾಷನಲ್ ಹೆಲ್ತ್ ಅಂಡ್ ನ್ಯುಟ್ರಿಷನ್ ಎಕ್ಸಾಮಿನೇಷನ್ ಸರ್ವೇಯ ಮಾಹಿತಿಯನ್ನು ಬಳಸಿಕೊಂಡು, 19 ವರ್ಷಕ್ಕಿಂತ ಮೇಲ್ಪಟ್ಟ 14,527 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಮಾನದಂಡಗಳೊಂದಿಗೆ ಮನೆಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸಿದರು.

ಈ ಅಧ್ಯಯನದ ಫಲಿತಾಂಶಗಳು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಮಧ್ಯಾಹ್ನ ಊಟದ ನಂತರ ಮಲಗುವ ಮೊದಲು ಹಲ್ಲುಗಳನ್ನು ಬ್ರಷ್ ಮಾಡುವವರಲ್ಲಿ ಹಲ್ಲುಗಳಿಗೆ ಸಂಬಂಧಿಸಿದ (ಪೀರಿಯಡಾಂಟಲ್) ರೋಗಗಳ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಇದಲ್ಲದೆ, ರಾತ್ರಿ ಊಟದ ನಂತರ ಬ್ರಷ್ ಮಾಡುವುದರಿಂದ ಗಂಭೀರ ರೀತಿಯ ದಂತ ರೋಗಗಳೂ ಕಡಿಮೆಯಾಗಿರುವುದು ಕಂಡು ಬಂದಿದೆ. ಜೊತೆಗೆ ಓರಲ್ ಫ್ಲಾಸ್ ಮತ್ತು ಎಲೆಕ್ಟ್ರಿಕ್ ಟೂತ್ ಬ್ರಷ್‌ಗಳ ಬಳಕೆಯಿಂದ ಮತ್ತಷ್ಟು ಉತ್ತಮ ಫಲಿತಾಂಶಗಳು ಕಂಡುಬಂದಿದೆ.

ದಿನಕ್ಕೆ ಮೂರು ಬಾರಿ ಬ್ರಷ್ ಮಾಡುವುದು ಹಾನಿಕರವೇ?

ಕೆಲವು ವರದಿಗಳಲ್ಲಿ ಹಲ್ಲಿನ ಮೇಲಿರುವ ಎನಾಮೆಲ್ ಎಂಬ ಪದರವನ್ನು ಹಾಳು ಮಾಡುತ್ತದೆ ಎಂದು ಹೇಳಿವೆ. ಆದರೆ, ದಿನಕ್ಕೆ ಮೂರು ಬಾರಿ ಬ್ರಷ್ ಮಾಡುವುದು ಅತಿಯಾಗುವುದಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಅಮೆರಿಕನ್ ಡೆಂಟಲ್ ಅಸೋಸಿಯೇಷನ್ ಸಹ ಊಟದ ನಂತರ ಹಲ್ಲುಗಳನ್ನು ಬ್ರಷ್ ಮಾಡುವುದು ಉತ್ತಮ ಎಂದು ಶಿಫಾರಸು ಮಾಡಿದೆ. ಇಲ್ಲಿ ಮುಖ್ಯವಾದುದು ಸರಿಯಾದ ಬ್ರಷಿಂಗ್ ತಂತ್ರ ಮತ್ತು ಮೃದುವಾದ ಬ್ರಷ್ ಬಳಕೆಯಾಗಿದೆ ಎಂದು ತಿಳಿಸಿದೆ.

ಊಟ ಮಾಡಿದ ಕೆಲವೇ ನಿಮಿಷಗಳಲ್ಲಿ ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ ಮತ್ತು ಆಹಾರದ ಕಣಗಳು ಜಮೆಯಾಗಲು ಆರಂಭಿಸುತ್ತವೆ. ವಿಶೇಷವಾಗಿ ಸಕ್ಕರೆಯುಕ್ತ ಆಹಾರಗಳು ಅಥವಾ ಬೆಳ್ಳುಳ್ಳಿ, ಮಸಾಲೆ ಪದಾರ್ಥಗಳಂತಹ ತೀವ್ರ ವಾಸನೆಯ ಆಹಾರ ಸೇವಿಸಿದ ನಂತರ ಇದು ಹೆಚ್ಚು ಕಂಡುಬರುತ್ತದೆ.

ಕೊರಿಯನ್ 3-3-3 ದಂತ ಶುದ್ಧತಾ ಮಾರ್ಗಸೂಚಿಯನ್ನು ಅನುಸರಿಸುವುದರಿಂದ ಈ ಬ್ಯಾಕ್ಟೀರಿಯಾ ಸಂಗ್ರಹವನ್ನು ನಿಯಂತ್ರಿಸಬಹುದು. ಇದರಿಂದ ದುರ್ವಾಸನೆ, ಕ್ಯಾವಿಟಿಗಳು ಮತ್ತು ಗಮ್ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.

ಒಟ್ಟಿನಲ್ಲಿ, ಕೊರಿಯನ್ 3-3-3 ಬ್ರಷಿಂಗ್ ವಿಧಾನವು ಕೇವಲ ಶಿಸ್ತುಬದ್ಧ ಅಭ್ಯಾಸವಲ್ಲ, ದೀರ್ಘಕಾಲಿಕ ದಂತ ಆರೋಗ್ಯಕ್ಕೆ ಸಹಾಯಕವಾಗುವ ವಿಜ್ಞಾನಾಧಾರಿತ ವಿಧಾನವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ; ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸೂಚನೆ

'ಗಿಲ್ಲಿ 'ಬಡವ' ಅಂತ ಅನ್ನೋದಾದ್ರೆ, BiggBoss ವ್ಯಕ್ತಿತ್ವದ ಆಟ ಹೇಗಾಯ್ತು? ಅಶ್ವಿನಿ ಗೌಡ ಬೇಸರ

25 ಲಕ್ಷ ರೂ. ಲಂಚ ಪ್ರಕರಣ: ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು

GBA ಚುನಾವಣೆ: EVM ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಗೆ ಚುನಾವಣಾ ಆಯೋಗದ ನಿರ್ಧಾರ

SCROLL FOR NEXT