ಬಳಸಿದ ಅಡುಗೆ ಎಣ್ಣೆ Online Desk
ಜೀವನಶೈಲಿ

ಪೂರಿ, ಬಜ್ಜಿ ಬೇಯಿಸಿದ ಎಣ್ಣೆ ಎಸೆಯೋ ಮುನ್ನ ನಿಲ್ಲಿ! ಅದರಿಂದಲೇ ಈ ಕೆಲಸಗಳನ್ನ ಮಾಡಿ; ಹಣ ಮತ್ತು ಟೈಮ್ ಎರಡನ್ನೂ ಸೇವ್ ಮಾಡಿ

Kitchen Hacks: ಪೂರಿ, ಬಜ್ಜಿ, ವಡೆ ಮಾಡಿದ ನಂತರ ಉಳಿದ ಬಿಸಿಯಾದ ಎಣ್ಣೆಯನ್ನು ನೇರವಾಗಿ ಸಿಂಕ್ ಅಥವಾ ಕಸದ ಬುಟ್ಟಿಗೆ ಸುರಿಯುತ್ತೀರಾ? ಹಾಗೆ ಮಾಡಿದ್ರೆ ಸ್ಟಾಪ್! ಆ ಬಳಸಿದ ಎಣ್ಣೆಯನ್ನು ಇನ್ನೂ 2-3 ಬಾರಿ ಬಳಸಬಹುದು ಮತ್ತು ಮನೆಯ ಇತರ ಕೆಲಸಕ್ಕೂ ಉಪಯೋಗಿಸಬಹುದು. ಆ ಕುರಿತ ವರದಿ ಇಲ್ಲಿದೆ:

Kitchen Hacks: ಅಡುಗೆಮನೆಯಲ್ಲಿ ಪೂರಿ, ಬಜ್ಜಿ, ವಡೆ ಅಥವಾ ಬೋಂಡಾ ಕರಿದ ನಂತರ ಉಳಿಯುವ ಎಣ್ಣೆಯನ್ನು ಸಾಮಾನ್ಯವಾಗಿ ಹಲವರು ಎಸೆದುಬಿಡುತ್ತಾರೆ. ಆದರೆ, ಹೀಗೆ ಎಣ್ಣೆಯನ್ನು ಸಿಂಕ್‌ಗೆ ಸುರಿಯುವುದರಿಂದ ಪೈಪ್‌ಗಳು ಬ್ಲಾಕ್ ಆಗುವ ಸಾಧ್ಯತೆ ಹೆಚ್ಚು. ಈ ಬಳಸಿದ ಎಣ್ಣೆ ಕೇವಲ ಕಸವಲ್ಲ, ಯಾಕಂದ್ರೆ, ಸರಿಯಾದ ರೀತಿಯಲ್ಲಿ ಬಳಸಿದರೆ ಮನೆಯ ಹಲವು ಕೆಲಸಗಳಿಗೆ ಸಹಾಯವಾಗುವ ಅತ್ಯುತ್ತಮ ವಸ್ತುವಾಗಿದೆ. ಇದನ್ನು ಅಡುಗೆಗೆ ಪದೇ ಪದೇ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಾದರೂ, ಮನೆಯ ಇತರೆ ಕೆಲಸಕ್ಕೆ ಆರಾಮಾಗಿ ಬಳಸಬಹುದು! ಆ ಕುರಿತ ವರದಿ ಇಲ್ಲಿದೆ:

ಎಣ್ಣೆಯನ್ನು ಹೇಗೆ ಮತ್ತೆ ಬಳಸುವುದು?

  1. ತಣ್ಣಗಾಗಿಸಿ: ಎಣ್ಣೆ ಸಂಪೂರ್ಣ ತಣ್ಣಗಾದ ನಂತರವೇ ಮುಂದಿನ ಸ್ಟೆಪ್.

  2. ಸೋಸಿ: ತೆಳುವಾದ ಬಟ್ಟೆ ಅಥವಾ ಕಾಫಿ ಫಿಲ್ಟರ್‌ನಿಂದ ಸೋಸಿ. ಆಹಾರದ ತುಂಡುಗಳು ಇದ್ದರೆ ಎಣ್ಣೆ ಬೇಗ ಕೆಡುತ್ತದೆ.

  3. ಗಾಜಿನ ಬಾಟಲಿಯಲ್ಲಿ ಶೇಖರಿಸಿ: ಗಾಳಿ ಆಡದ ಗಾಜಿನ ಬಾಟಲಿಯಲ್ಲಿ ಇಟ್ಟು ಡಾರ್ಕ್ ಜಾಗದಲ್ಲಿ ಇಡಿ. 2-3 ಬಾರಿ ಅದೇ ತರಹದ ಫ್ರೈಗೆ ಬಳಸಬಹುದು.

ಏತನ್ಮಧ್ಯೆ, ಮೀನು ಫ್ರೈ ಮಾಡಿದ ಎಣ್ಣೆಯನ್ನು ಸಿಹಿಗೆ ಬಳಸಬೇಡಿ. ವಾಸನೆ ಬರುತ್ತದೆ.ಕೂಡ

ಬಳಸಿದ ಎಣ್ಣೆಯಿಂದ ಮಾಡಬಹುದಾದ 5 ಕೆಲಸ:

  1. ಸೋಪ್ಅಥವಾ ಲಿಕ್ವಿಡ್ ಕ್ಲೀನರ್ ಮಾಡಿ

    ಬಳಸಿದ ಎಣ್ಣೆ + ಕಾಸ್ಟಿಕ್ ಸೋಡಾ + ನೀರು ಮಿಕ್ಸ್ ಮಾಡಿದರೆ ಮನೆಗೆ ಬೇಕಾದ ಲಿಕ್ವಿಡ್ ಸೋಪ್ ರೆಡಿ. ಒಲೆ, ಗ್ರಿಲ್ ಕ್ಲೀನ್ ಮಾಡಲು ಕೂಡ ಸೂಪರ್.

  2. ತುಕ್ಕು ತೆಗೆಯಲು

    ಬಾಗಿಲಿನ ಕೀ, ಸೈಕಲ್ ಚೈನ್, ಕತ್ತರಿ, ಚಾಕುಗಳಿಗೆ 2 ಹನಿ ಹಳೆಯ ಎಣ್ಣೆ ಹಾಕಿದರೆ ತುಕ್ಕು ಹಿಡಿಯುವುದಿಲ್ಲ. ಸ್ಮೂತ್ ಆಗಿ ಕೆಲಸ ಮಾಡುತ್ತದೆ.

  3. ಗಿಡಗಳಿಗೆ ಕೀಟನಾಶಕ ಸ್ಪ್ರೇ

    1 ಲೀಟರ್ ನೀರಿಗೆ 2 ಚಮಚ ಬಳಸಿದ ಎಣ್ಣೆ + 2 ಚಮಚ ಲಿಕ್ವಿಡ್ ಸೋಪ್ ಮಿಕ್ಸ್ ಮಾಡಿ ಗಿಡಕ್ಕೆ ಸ್ಪ್ರೇ ಮಾಡಿ. ಗಿಡದ ಮೇಲಿನ ಜಿಗಟು ಮತ್ತು ಸಣ್ಣ ಕೀಟಗಳು ನಾಶವಾಗುತ್ತವೆ.

  4. ಮರದ ಪೀಠೋಪಕರಣ ಹೊಳಪಿಗೆ;

    ಹಳೆಯ ಮರದ ಟೇಬಲ್, ಕುರ್ಚಿ ಮಂಕಾಗಿದೆಯಾ?

    ಸ್ವಲ್ಪ ಎಣ್ಣೆಯನ್ನು ಬಟ್ಟೆಗೆ ಹಚ್ಚಿ ಒರೆಸಿ. ಮರಕ್ಕೆ ಮತ್ತೆ ಹೊಳಪು ಬರುತ್ತದೆ.

  5. ದೀಪ ಹಚ್ಚಲು

    ಹಬ್ಬದ ಸಮಯದಲ್ಲಿ ಅಥವಾ ಎಮರ್ಜೆನ್ಸಿ ದೀಪಕ್ಕೆ ಈ ಎಣ್ಣೆಯನ್ನು ಬಳಸಬಹುದು. ಸ್ವಲ್ಪ ಹತ್ತಿ ಹಾಕಿ ದೀಪ ಹಚ್ಚಿ.

ಬಳಸಿದ ಅಡುಗೆ ಎಣ್ಣೆ

ಯಾವಾಗ ಎಣ್ಣೆ ಎಸೆಯಲೇಬೇಕು?

  • ಎಣ್ಣೆಯ ಬಣ್ಣ ಕಪ್ಪು ಆಗಿದ್ದರೆ

  • ಎಣ್ಣೆಯ ವಾಸನೆ ಬದಲಾದರೆ

  • ಬಿಸಿ ಮಾಡುವ ವೇಳೆ ಹೊಗೆ ಜಾಸ್ತಿ ಬಂದರೆ

ಎಲ್ಲದಕ್ಕಿಂತಲೂ ಮುಖ್ಯವಾಗಿ, ಎಂದಿಗೂ ಬಿಸಿಯಾದ ಎಣ್ಣೆಯನ್ನು ಸಿಂಕ್‌ಗೆ ಸುರಿಯಬೇಡಿ. ಪೈಪ್ ಬ್ಲಾಕ್ ಆಗುತ್ತದೆ. ತಣ್ಣಗಾದ ನಂತರ ಬಾಟಲಿಯಲ್ಲಿ ಸಂಗ್ರಹಿಸಿ ಕಸದ ಜೊತೆ ಎಸೆಯಿರಿ. ಹಾಗಾಗಿ, ಮುಂದಿನ ಬಾರಿ ಪೂರಿ ಮಾಡಿದಾಗ ಈ ಟ್ರಿಕ್ ಟ್ರೈ ಮಾಡಿ. ಎಣ್ಣೆಯೂ ಉಳಿಯುತ್ತೆ, ಪೈಸೆಯೂ ಉಳಿಯುತ್ತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ಪರೀಕ್ಷೆ ನಡೆಸುವ NTA ನಲ್ಲಿ ಮೇಜರ್ ಸರ್ಜರಿ: 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ!

ಪಾಕ್‌ನಲ್ಲಿ ರಕ್ತದೋಕುಳಿ: ಸೇನಾ ಚೆಕ್‌ಪಾಯಿಂಟ್‌ ಧ್ವಂಸ; 15 Pak ಸೈನಿಕರು ಬಲಿ, 12 ಉಗ್ರರು ಸಾವು!

10 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ. ದಂಡ: ಪ್ರಶ್ನೆಪತ್ರಿಕೆ ಸೋರಿಕೆ, ಕಠಿಣ ಶಿಕ್ಷೆ ವಿಧಿಸುವ ಮಸೂದೆ ಜಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ!

ಪ್ರಧಾನ್ ರಾಜಿನಾಮೆ ಕುರಿತು ಕೇಂದ್ರ ನಾಳೆ ನಿರ್ಧಾರ; ಮೃತ NEET ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ ಪರಿಹಾರಕ್ಕೆ ತಾತ್ವಿಕ ಒಪ್ಪಿಗೆ: CJP; Video

ಧರ್ಮೇಂದ್ರ ಪ್ರಧಾನ್ ಒಬ್ಬ 'ಕ್ರಿಮಿನಲ್ ಶಿಕ್ಷಣ ಸಚಿವ; ವಿದ್ಯಾರ್ಥಿಗಳಿಗೆ ಪೆಲೆಟ್ ಗನ್ ಗಾಯ; ಮೋದಿ ಕ್ಷಮೆ ಕೇಳಲಿ- ರಾಹುಲ್ ಆಗ್ರಹ