ಅನ್ನ vs ಚಪಾತಿ ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ? AI Image
ಜೀವನಶೈಲಿ

ತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ vs ಚಪಾತಿ ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ದೊಡ್ಡ ಗೊಂದಲವೆಂದರೆ ರಾತ್ರಿ ಊಟಕ್ಕೆ ಅನ್ನ ತಿನ್ನಬೇಕಾ ಅಥವಾ ಚಪಾತಿ ತಿನ್ನಬೇಕಾ. ಇವೆರಡರಲ್ಲಿ ಯಾವುದು ಬೆಸ್ಟ್ ಎಂಬದುರ ಕುರಿತ ಮಾಹಿತಿ ಇಲ್ಲಿದೆ:

Weight Loss Tips: ದಿನವಿಡೀ ಡಯಟ್ ಮಾಡಿ ರಾತ್ರಿ ಊಟದ ಸಮಯಕ್ಕೆ ಬಂದರೆ ಸಾಕು, ಪ್ರತಿಯೊಬ್ಬರ ತಲೆಯಲ್ಲೂ ಒಂದೇ ಗೊಂದಲ ಶುರುವಾಗುತ್ತದೆ: ಇಂದು ರಾತ್ರಿ ಅನ್ನ ತಿನ್ನಬೇಕಾ ಅಥವಾ ಚಪಾತಿಯೇ ಉತ್ತಮವಾ? ಅನ್ನ ತಿಂದರೆ ತೂಕ ಹೆಚ್ಚಾಗುತ್ತಾ, ಚಪಾತಿಯಿಂದ ಮಾತ್ರ ಸಣ್ಣಗಾಗಲು ಸಾಧ್ಯವೇ ಎನ್ನುವ ಸಂಶಯ ಬಹುತೇಕರನ್ನು ಕಾಡುತ್ತದೆ. ಆದರೆ, ಈ ಎರಡರಲ್ಲಿ ದೇಹದ ತೂಕ ಇಳಿಸಲು ನಿಜಕ್ಕೂ ಯಾವುದು ಹೆಚ್ಚು ಸಹಕಾರಿ ಮತ್ತು ವೈದ್ಯರು ರಾತ್ರಿ ಊಟಕ್ಕೆ ಏನನ್ನು ಶಿಫಾರಸು ಮಾಡುತ್ತಾರೆ? ಇಲ್ಲಿದೆ ಆ ಕುರಿತ ಸಂಪೂರ್ಣ ವಿವರ.

100 ಗ್ರಾಂ ಅನ್ನ ಮತ್ತು ಚಪಾತಿಯಲ್ಲಿ ಏನಿದೆ?

  • 1 ಕಪ್ ಬಿಳಿ ಅನ್ನ, ಅಂದರೆ ಸುಮಾರು 100 ಗ್ರಾಂ ನಲ್ಲಿ 130 ಕ್ಯಾಲೋರಿ ಇರುತ್ತದೆ. ಕಾರ್ಬೋಹೈಡ್ರೇಟ್ ಜಾಸ್ತಿ, ಫೈಬರ್ ಕಡಿಮೆ.

  • 1 ಚಪಾತಿ, 40 ಗ್ರಾಂ ನಲ್ಲಿ ಸುಮಾರು 120 ಕ್ಯಾಲೋರಿ ಇರುತ್ತದೆ. ಆದರೆ ಇದರಲ್ಲಿ ಫೈಬರ್ ಜಾಸ್ತಿ ಮತ್ತು ಪ್ರೋಟೀನ್ ಸ್ವಲ್ಪ ಜಾಸ್ತಿ ಇರುತ್ತದೆ.

ತೂಕ ಇಳಿಸಲು ಯಾವುದು ಬೆಸ್ಟ್?

ನೇರವಾಗಿ ಹೇಳುವುದಾದರೆ ತೂಕ ಇಳಿಸಲು ಚಪಾತಿ ಅನ್ನಕ್ಕಿಂತ ಸ್ವಲ್ಪ ಉತ್ತಮ.

  • ಕಾರಣ 1: ಫೈಬರ್ ಜಾಸ್ತಿ. ಗೋಧಿ ಚಪಾತಿಯಲ್ಲಿ ಫೈಬರ್ ಇರುವುದರಿಂದ ಹೊಟ್ಟೆ ಬೇಗ ತುಂಬುತ್ತದೆ ಮತ್ತು ಹೆಚ್ಚು ತಿನ್ನುವ ಆಸೆ ಕಡಿಮೆಯಾಗುತ್ತದೆ. ಅನ್ನದಲ್ಲಿ ಫೈಬರ್ ಕಡಿಮೆ.

  • ಕಾರಣ 2: ಗ್ಲೈಸೆಮಿಕ್ ಇಂಡೆಕ್ಸ್. ಬಿಳಿ ಅನ್ನದ ಗ್ಲೈಸೆಮಿಕ್ ಇಂಡೆಕ್ಸ್ ಜಾಸ್ತಿ, ಇದು ಬೇಗ ಜೀರ್ಣವಾಗಿ ಬೇಗ ಹಸಿವಾಗುವಂತೆ ಮಾಡುತ್ತದೆ. ಚಪಾತಿ ನಿಧಾನವಾಗಿ ಜೀರ್ಣವಾಗುತ್ತದೆ.

  • ಕಾರಣ 3: ರಾತ್ರಿ ಊಟಕ್ಕೆ ಚಪಾತಿ ಹಗುರ. ರಾತ್ರಿ ಅನ್ನ ತಿಂದರೆ ಅನೇಕರಿಗೆ ಹೊಟ್ಟೆ ಉಬ್ಬರ, ಜೀರ್ಣ ಸಮಸ್ಯೆ ಬರುತ್ತದೆ.

ಹಾಗಾದರೆ ಅನ್ನವೇ ತಿನ್ನಬಾರದಾ?

ಇಲ್ಲ, ಅನ್ನ ತಿನ್ನಲೇಬಾರದು ಎಂದಲ್ಲ. ನೀವು ಅನ್ನ ಪ್ರಿಯರಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

  • ಬಿಳಿ ಅನ್ನದ ಬದಲು ಕಂದು ಅಕ್ಕಿ ಅಂದರೆ Brown Rice ಅಥವಾ ದಪ್ಪ ಅಕ್ಕಿಯ ಅನ್ನ ತಿನ್ನಿ.

  • ರಾತ್ರಿ 1 ಪ್ಲೇಟ್ ತುಂಬಾ ಅನ್ನ ತಿನ್ನುವ ಬದಲು ಅರ್ಧ ಕಪ್ ಅನ್ನ ಮತ್ತು ಜೊತೆಗೆ ಸಾಕಷ್ಟು ತರಕಾರಿ, ದಾಲ್, ಮೊಸರು ತಿನ್ನಿ.

  • ರಾತ್ರಿ 8 ಗಂಟೆಯೊಳಗೆ ಊಟ ಮುಗಿಸಿ.

ವೈದ್ಯರು ಹೇಳುವ ಬೆಸ್ಟ್ ಪ್ಲಾನ್ ಏನು?

ತೂಕ ಇಳಿಸಲು ರಾತ್ರಿ ಊಟಕ್ಕೆ 2 ಸಣ್ಣ ಚಪಾತಿ + 1 ಬೌಲ್ ತರಕಾರಿ + 1 ಬೌಲ್ ದಾಲ್ ಅಥವಾ ಮೊಸರು ಇದನ್ನು ಬೆಸ್ಟ್ ಕಾಂಬಿನೇಷನ್ ಎಂದು ಹೇಳಲಾಗುತ್ತದೆ. ಇದು ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ. ವಾರದಲ್ಲಿ 2 ದಿನ ಅನ್ನ ತಿನ್ನಬೇಕು ಎನಿಸಿದರೆ ಮಧ್ಯಾಹ್ನ ಅನ್ನ ತಿಂದು ರಾತ್ರಿ ಚಪಾತಿ ತಿನ್ನುವುದು ಒಳ್ಳೆಯದು.

ನೆನಪಿಡಿ, ಅನ್ನ ತಿಂದರೆ ದಪ್ಪ ಆಗ್ತೀರಿ, ಚಪಾತಿ ತಿಂದರೆ ಸಣ್ಣ ಆಗ್ತೀರಿ ಎಂಬುದಲ್ಲ. ಒಟ್ಟು ದಿನದಲ್ಲಿ ನೀವು ಎಷ್ಟು ಕ್ಯಾಲೋರಿ ತಿಂದಿದ್ದೀರಿ ಎಂಬುದು ಮುಖ್ಯ. ಆದರೆ ರಾತ್ರಿ ಊಟಕ್ಕೆ ಹಗುರವಾಗಿ ಮತ್ತು ಫೈಬರ್ ಇರುವ ಆಹಾರ ಬೇಕು ಎಂದರೆ ಚಪಾತಿಯೇ ಬೆಸ್ಟ್ ಆಯ್ಕೆ.

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

2029ಕ್ಕೂ ಮುನ್ನ NDA ಸರ್ಕಾರವಿರುವ ಎಲ್ಲಾ 21 ರಾಜ್ಯಗಳಲ್ಲಿ UCC ಜಾರಿ: ಗೃಹ ಸಚಿವ ಅಮಿತ್ ಶಾ

ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

'ತಾಕತ್ತಿದ್ದರೆ ಟ್ರೈ ಮಾಡು ಮಗ, ಆಲ್ ದಿ ಬೆಸ್ಟ್ ರಣಹೇಡಿ': ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದ ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಚಾಲೆಂಜ್!

WTC 2025-27: ಕೇವಲ 9 ಪಂದ್ಯಗಳಲ್ಲೇ ICC ಟೆಸ್ಟ್ ಚಾಂಪಿಯನ್ ಷಿಪ್ ನಿಂದ ಪಾಕಿಸ್ತಾನ ಕಿಕೌಟ್!