ಚೆನ್ನೈ: ಎರಡು ದಿನ ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಶುಕ್ರವಾರ ಸಂಜೆ ಮಹಾಬಲಿಪುರಂಗೆ ಆಗಮಿಸಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅದ್ಧೂರಿ ಸ್ವಾಗತ ನೀಡಿದರು.
ಇಂದು ಮಧ್ಯಾಹ್ನ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೀನಾ ಅಧ್ಯಕ್ಷರಿಗೆ ಸಾಂಪ್ರದಾಯಿಕ ನೃತ್ಯದ ಮೂಲಕ ತಮಿಳುನಾಡು ಸರ್ಕಾರ ಅಭುತಪೂರ್ವ ಸ್ವಾಗತ ಕೋರಿತ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಖಾಸಗಿ ಹೋಟೆಲ್ ಗೆ ತೆರಳಿದ ಕ್ಸಿ ಜಿನ್ ಪಿಂಗ್ ಅವರು 4 ಗಂಟೆಗೆ ರಸ್ತೆ ಮೂಲಕ ಮಹಾಬಲಿಪುರಂಗೆ ಆಗಮಿಸಿದರು. ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರ ಆಗಮನಕ್ಕಾಗಿ ಕಾಯುತ್ತಿದ್ದ ಪ್ರಧಾನಿ ಮೋದಿ ಅವರು, ದಕ್ಷಿಣ ಭಾರತದ ಸಾಂಪ್ರದಾಯಿಕ ಧಿರಿಸು ಪಂಚೆ ಧರಿಸಿ ಕ್ಸಿ ಜಿನ್ ಪಿಂಗ್ ಅವರನ್ನು ಬರಮಾಡಿಕೊಂಡರು. ಅಲ್ಲದೆ ಐತಿಹಾಸಿಕ ತಾಣ ಮಹಾಬಲಿಪುರಂ ಕುರಿತು ಚೀನಾ ಅಧ್ಯಕ್ಷರಿಗೆ ಸ್ವತಃ ಗೈಡ್ ಮಾಡಿದರು.