ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆ ವೇಳೆ ನಟ ಸಲ್ಮಾನ್ ಖಾನ್ 
ಹಿನ್ನೋಟ 2015

ಹಿಟ್ ಅಂಡ್ ರನ್ ಪ್ರಕರಣ ಖುಲಾಸೆಯಾದ ನಟ ಸಲ್ಮಾನ್ ಖಾನ್

2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ ದಶಕದಿಂದ ನಟ ಸಲ್ಮಾನ್...

2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ  ದಶಕದಿಂದ ನಟ ಸಲ್ಮಾನ್ ಖಾನ್ ರ ಬೆನ್ನು ಬಿಡದೇ ಅಂಟಿಕೊಂಡಿದ್ದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬಾಂಬೇ ಹೈಕೋರ್ಟ್ ತಾರ್ಕಿಕವಾಗಿ ಅಂತ್ಯವಾಡಿದೆ.

ಈ ಹಿಂದೆ ಮುಂಬೈ ಸೆಷನ್ಸ್ ನ್ಯಾಯಾಲಯ ನೀಡಿದ್ದ 5 ವರ್ಷಗಳ ಸಜೆಯನ್ನು ಅಮಾನತು ಮಾಡಿದ ಬಾಂಬೆ ಹೈಕೋರ್ಟ್ ಪ್ರಕರಣದಿಂದ ನಟ ಸಲ್ಮಾನ್ ಖಾನ್ ರನ್ನು ಖುಲಾಸೆಗೊಳಿಸಿದೆ.  ಆದರೆ ಈ ವೇಳೆ ಪ್ರಾಸಿಕ್ಯೂಷನ್ ನನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಸಲ್ಮಾನ್ ಅಪರಾಧಿ ಎಂದು ಸಾಬೀತು ಪಡಿಸುವಲ್ಲಿ ಅದು ವಿಫಲವಾಗಿದೆ. ನ್ಯಾಯಾಲಯಕ್ಕೆ ಸೂಕ್ತ  ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ಕಿಡಿ ಕಾರಿತ್ತು. ಹೀಗಾಗಿಯೇ ಪೀಠ ಸಲ್ಮಾನ್ ಖಾನ್ ನನ್ನು ನಿರಪರಾಧಿ ಎಂದು ಘೋಷಣೆ ಮಾಡಿದೆ ಎಂದು ತನ್ನ ತೀರ್ಪನ್ನು  ಸಮರ್ಥಿಸಿಕೊಂಡಿತು.

ಅಲ್ಲದೆ ಪ್ರಕರಣ ಸಂಬಂಧ ಪೊಲೀಸರು ನೀಡಿದ ಸಾಕ್ಷ್ಯಾಧಾರಗಳಾದ ರಕ್ತದ ಮಾದರಿ, ಅಪಘಾತದ ವೇಳೆ ಕಾರು ಚಾಲನೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ ಚಾಲಕನ ದ್ವಂದ್ವ ಹೇಳಿಕೆ ಮತ್ತು  ಅಂದು ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿದ್ದ ರವೀಂದ್ರ ಪಾಟಿಲ್‌ ನ ಹೇಳಿಕೆಗಳು ಆರೋಪವನ್ನು ಪುಷ್ಠೀಕರಿಸುತ್ತಿಲ್ಲ ಎಂದು ನ್ಯಾಯಾಧೀಶರಾದ  ಜೋಷಿ ಅಭಿಪ್ರಾಯಪಟ್ಟಿದ್ದರು.

ನ್ಯಾಯಾಲಯದ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರೋಶ
ಇನ್ನು ಈ ಪ್ರಕರಣ ಸಂಬಂಧ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದ ನೂರುಲ್ಲಾ  ಖಾನ್ ಅವರು ಮಗ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT