ಸಂಗ್ರಹ ಚಿತ್ರ 
ಹಿನ್ನೋಟ 2022

ಹಿನ್ನೋಟ 2022: ಫೀಫಾ ವಿಶ್ವಕಪ್ ಗೆದ್ದ ಮೆಸ್ಸಿ, ಪ್ರಥಮಗಳಿಗೆ ನಾಂದಿ ಹಾಡಿದ ನೀರಜ್ ಸೇರಿದಂತೆ ಅತ್ಯುತ್ತಮ ಕ್ರೀಡಾ ಕ್ಷಣಗಳು!

FIFA ವಿಶ್ವಕಪ್ ಕತಾರ್ 2022 ರ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ಗಳಲ್ಲಿ 4-2 ರಿಂದ ಫ್ರಾನ್ಸ್ ಅನ್ನು ಸೋಲಿಸಿತು. ಇದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ ಕ್ಷಣವಾಗಿದೆ.

FIFA ವಿಶ್ವಕಪ್ ಕತಾರ್ 2022 ರ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ಗಳಲ್ಲಿ 4-2 ರಿಂದ ಫ್ರಾನ್ಸ್ ಅನ್ನು ಸೋಲಿಸಿತು. ಇದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ ಕ್ಷಣವಾಗಿದೆ. ಲಿಯೋನೆಲ್ ಮೆಸ್ಸಿಯ ಸಾಧನೆಯಿಂದ ಅರ್ಜೆಂಟೀನಾಕ್ಕಾಗಿ 2022ರ ವಿಶ್ವಕಪ್ ಗೆಲ್ಲವುದರಿಂದ ಹಿಡಿದು ಟೆನಿಸ್ ದಂತಕಥೆ ರೋಜರ್ ಫೆಡರರ್ ನಿವೃತ್ತಿ ಘೋಷಿಸುವವರೆಗೆ, 2022 ಕ್ರೀಡಾ ಜಗತ್ತಿನಲ್ಲಿ ಹಲವಾರು ಗಮನಾರ್ಹ ಕ್ಷಣಗಳಿಗೆ ಸಾಕ್ಷಿಯಾಗಿದೆ. 

ಲಿಯೋನಾಲ್ ಮೆಸ್ಸಿ ನಾಯಕತ್ವದಲ್ಲಿ ಫೀಫಾ ಚಾಂಪಿಯನ್ ಆದ ಅರ್ಜೆಂಟೀನಾ
ಕತಾರ್ ನಲ್ಲಿ ನಡೆದ FIFA ವಿಶ್ವಕಪ್ 2022ರಲ್ಲಿ ಅರ್ಜೆಂಟೀನಾ ತಂಡವನ್ನು ಲಿಯೋನೆಲ್ ಮೆಸ್ಸಿ ಮುನ್ನಡೆಸಿದರು. 36 ವರ್ಷಗಳ ಬಳಿಕ ಅರ್ಜೆಂಟೀನಾ ಚಾಂಪಿಯನ್ ಪಟ್ಟ ಅಲಂಕರಿಸಿತು. 35 ವರ್ಷದ ಮೆಸ್ಸಿಗೆ ಇದು ಮೊದಲ ವಿಶ್ವಕಪ್ ಟ್ರೋಫಿಯ ಜಯವಾಗಿದೆ. ಮೆಸ್ಸಿ ಫುಟ್ಬಾಲ್ ನ ಶ್ರೇಷ್ಠರಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದರು. ಪಂದ್ಯಾವಳಿಯಲ್ಲಿ ಮೆಸ್ಸಿ ಒಟ್ಟು ಏಳು ಗೋಲುಗಳನ್ನು ಗಳಿಸಿದರು. ಅತ್ಯುತ್ತಮ ಆಟಗಾರನಾಗಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದರು.

ICC ಪುರುಷರ T20 ವಿಶ್ವಕಪ್ 2022ರ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಜೋಸ್ ಬಟ್ಲರ್
ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ತನ್ನ ಎರಡನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೆನ್ ಸ್ಟೋಕ್ಸ್ 52 ರನ್‌ಗಳ ಅಜೇಯ ಆಟ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಪ್ರಭಾವಶಾಲಿ ವಿಜಯಕ್ಕೆ ಕಾರಣವಾಯಿತು. ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತವನ್ನು 10 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ಫೈನಲ್‌ಗೆ ಪ್ರವೇಶಿಸಿತು.

ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ ರೋಜರ್ ಫೆಡರರ್ 
ರೋಜರ್ ಫೆಡರರ್ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದು 2022ರ ಪ್ರಮುಖ ಕ್ರೀಡಾ ಕ್ಷಣಗಳಲ್ಲಿ ಒಂದಾಗಿದೆ. ಟೆನಿಸ್ ದಂತಕಥೆಯು ವಿಂಬಲ್ಡನ್ 2021ರ ಪ್ರವಾಸದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಾಗ, ಅವರು 2022ರ ಉತ್ತರಾರ್ಧದಲ್ಲಿ ಪೂರ್ಣ ಪುನರಾಗಮನವನ್ನು ನಿರೀಕ್ಷಿಸಿದ್ದರು. 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಅವರು ಲೇವರ್ ಕಪ್ 2022ರ ನಂತರ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸುವ ಮೂಲಕ ಟೆನಿಸ್ ಜಗತ್ತನ್ನು ಆಘಾತಗೊಳಿಸಿದರು.

IPL 2022ರಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಗುಜರಾತ್ ಟೈಟಾನ್ಸ್ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ
ಸ್ಟಾರ್ ಇಂಡಿಯನ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು 2022ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಚೊಚ್ಚಲ ಋತುವಿನಲ್ಲಿ ಹೊಸ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ನಾಯಕರಾಗಿ ನೇಮಕಗೊಂಡರು. ಪಾಂಡ್ಯ ತಂಡವನ್ನು ಮುನ್ನಡೆಸಿದ್ದು ತಂಡದೊಂದಿಗೆ IPL 2022 ಟ್ರೋಫಿಯನ್ನು ಗೆದ್ದರು. ಇದು ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡು ಸರಣಿಗಳಲ್ಲಿ ಪಾಂಡ್ಯ ಭಾರತದ T20I ನಾಯಕನಾಗಿ ನೇಮಕಗೊಳ್ಳಲು ಕಾರಣವಾಯಿತು.

2022ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ 
ಭಾರತ ಪುರುಷರ ಹಾಕಿ ತಂಡವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಕಂಚಿನ ಪದಕ ಗೆದ್ದ ಸಾಧನೆಯ ನಂತರ ಭಾರತೀಯ ಪುರುಷರ ತಂಡಕ್ಕೆ ಇದು ಒಂದು ವರ್ಷದಲ್ಲಿ ಎರಡನೇ ಮೈಲಿಗಲ್ಲಿನ ಪ್ರದರ್ಶನವಾಗಿದೆ. ಏತನ್ಮಧ್ಯೆ, ಭಾರತ ಮಹಿಳಾ ಹಾಕಿ ತಂಡವು ನ್ಯೂಜಿಲೆಂಡ್ ವಿರುದ್ಧ ಸೋತ ನಂತರ CWG 2022 ರಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿತು.       

19 ವರ್ಷದ ಟೆನಿಸ್ ಪ್ರಾಡಿಜಿ ಕಾರ್ಲೋಸ್ ಅಲ್ಕರಾಜ್‌ಗೆ ಕನಸಿನ ವರ್ಷ
2022ರ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಸ್ಪೇನ್‌ ದೇಶದ 19ರ ಹರೆಯದ ಯುವಕ, ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೆನಿಸ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್, ಪ್ರತಿಷ್ಠಿತ ಟ್ರೋಫಿ ಗೆದ್ದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಇನ್ನು ಕೇವಲ 19 ವರ್ಷ ಮತ್ತು ನಾಲ್ಕು ತಿಂಗಳ ವಯಸ್ಸಿನಲ್ಲಿ, ಸ್ಪೇನ್ ಆಟಗಾರ ಎಟಿಪಿ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 

2022ರಲ್ಲಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ
2020ರ ಟೋಕಿಯೊ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ವಿಜೇತ, ನೀರಜ್ ಚೋಪ್ರಾ 2022ರಲ್ಲಿ ಮತ್ತೊಂದು ಅದ್ಭುತ ವರ್ಷವನ್ನು ಕಂಡರು. ಓರೆಗಾನ್‌ನ ಯುಜೀನ್‌ನಲ್ಲಿ ನಡೆದ 2022ರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ನೀರಜ್‌ಗಿಂತ ಮೊದಲು ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ಇದಾದ ಬಳಿಕ ನೀರಜ್ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು.                                               

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ದೇವರ ಮೊರೆ ಹೋದ ಡಿಕೆಶಿ ಬೆಂಬಲಿಗರು: ಅಯ್ಯಪ್ಪ ಮಾಲಾಧಾರಿಗಳ ವಿಶೇಷ ಪೂಜೆ; ಗಣಪತಿ ದೇವಾಲಯಲ್ಲಿ ಈಡುಗಾಯಿ ಸೇವೆ!

SCROLL FOR NEXT