ಮಹಾಶಿವರಾತ್ರಿ

ಶಿವ ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು

Mainashree
ಪ್ರಜಾಪತಿ ದಕ್ಷ ಎಂಬ ಮಹಾರಾಜನಿದ್ದನು. ಆತ ಬ್ರಹ್ಮನ ಹತ್ತು ಮಾನಸ ಪುತ್ರರಲ್ಲಿ ಒಬ್ಬನಾಗಿದ್ದನು. ಬ್ರಹ್ಮನ ಹೆಬ್ಬೆರಳಿನಿಂದ ಹುಟ್ಟಿದವನು ದಕ್ಷ. ಈ ದಕ್ಷ ಮಹಾರಾಜನಿಗೆ ಪ್ರಸೂತಿ ಮತ್ತು ಪಂಚಜನಿ ಎಂಬ ಇಬ್ಬರು ಪತ್ನಿಯರಿದ್ದರು. ಇವರಿಬ್ಬರಿಂದ ಕ್ರಮವಾಗಿ ದಕ್ಷನು 89 ಮತ್ತು 116 ಹೆಣ್ಣು ಮಕ್ಕಳನ್ನು ಪಡೆದನು. ಇವರಲ್ಲಿ ಒಬ್ಬಾಕೆಯೇ"ದಾಕ್ಷಾಯಿಣಿ".
ಈ ದಾಕ್ಷಾಯಿಣಿ ಹರಿದ್ವಾರದಲ್ಲಿ ಶಿವನನ್ನು ವಿವಾಹವಾಗುತ್ತಾಳೆ. ಅದು ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿ ದಿನವಾಗಿರುತ್ತದೆ. ಹೀಗೆ ದಕ್ಷನು ಒಮ್ಮೆ ದೇವಲೋಕಕ್ಕೆ ಬಂದಾಗ ಬ್ರಹ್ಮ ವಿಷ್ಣು ಗೌರವ ಸೂಚಿಸುತ್ತಾರೆ. ಆದರೆ, ಪರಶಿವನ ಧ್ಯಾನಮಗ್ನನಾಗಿರುತ್ತಾನೆ. ಕುಪಿತನಾದ ದಕ್ಷನು ಭೂಲೋಕಕ್ಕೆ ಬಂದು ಮಹಾಯಾಗವನ್ನು ಮಾಡಲು ನಿರ್ಧರಿಸುತ್ತಾನೆ. ಈ ಯಾಗಕ್ಕೆ ಪರಶಿವನನ್ನು ಹೊರತುಪಡಿಸಿ ಇನ್ನುಳಿದ ದೇವಾನುದೇವತೆಗಳನ್ನು  ಯಾಗಕ್ಕೆ ಕರೆಯುತ್ತಾನೆ. ಈ ವಿಷಯ ದಾಕ್ಷಾಯಿಣಿಗೆ ತಿಳಿದು ತಂದೆಯಲ್ಲಿ ನ್ಯಾಯಾ ಕೇಳಲು ಭೂಲೋಕಕ್ಕೆ ಬರುತ್ತಾಳೆ, ಆಗ ದಕ್ಷನು ನಿನ್ನ ಪತಿಯು ಬೋಳೆಶಂಕರ, ಸ್ಮಶಾನವಾಸಿ, ಸದಾ ಕೀಳು ಜಂತುಗಳೊಂದಿಗೆ ವಾಸಿಸುವ ಭಿಕ್ಷುಕ ಎಂಬುದಾಗಿ ಹೀಯಾಳಿಸುತ್ತಾನೆ. ಇದರಿಂದ ಕುಪಿತಳಾದ ದಾಕ್ಷಾಯಿಣಿ ಈ ಯಜ್ಞವನ್ನು ನಾನು ನಾಶಪಡಿಸುವೆ ಎಂದು ಶಪಥಮಾಡಿ ಯಜ್ಞಕುಂಡದಲ್ಲಿ ಧುಮುಖಿ ದಾಕ್ಷಾಯಿಣಿಯು ಮಹಾಸತಿಯಾಗುತ್ತಾಳೆ. 
ದಕ್ಷಯಾಗದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಿಣಿ, ಪರ್ವತರಾಜನಿಗೆ ಮಗಳಾಗಿ ಹುಟ್ಟಿ, ಬೆಳೆದು ಪಾರ್ವತಿಯಾಗಿದ್ದಳು. ಶಿವನನ್ನು ವರಿಸಬೇಕೆಂದು ಪಾರ್ವತಿ ಮಾಘ ಮಾಸದ ಕೃಷ್ಣ ಪಕ್ಷ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡುತ್ತಾಳೆ. ಪಾರ್ವತಿಯ ತಪಸ್ಸಿಗೆ ಮೆಚ್ಚಿ ಶಿವನು ಪಾರ್ವತಿಯನ್ನು ವಿವಾಹವಾದನೆಂದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಶಿವ ರುದ್ರತಾಂಡವನಾಡಿದ ರಾತ್ರಿಯೂ ಇದೇ ದಿನ ಎಂದು ಹೇಳಲಾಗುತ್ತದೆ.
SCROLL FOR NEXT