2.5 ಲಕ್ಷ ಟ್ವಿಟರ್ ಪಾಸ್ವರ್ಡ್ ಹ್ಯಾಕ್
ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ತಾಣ ಟ್ವಿಟರ್ ಕೂಡ ಈಗ ಹೈಪ್ರೊಫೈಲ್ ಸೈಬರ್ ದಾಳಿಗೆ ಗುರಿಯಾಗಿದೆ. ಹ್ಯಾಕರ್ಗಳು ಸುಮಾರು 2.5 ಲಕ್ಷ ಟ್ವಿಟರ್ ಬಳಕೆದಾರರ ಪಾಸ್ವರ್ಡ್ಗಳನ್ನು ಕದ್ದಿದ್ದಾರೆ ಎಂಬುದನ್ನು ಸ್ವತಃ ಟ್ವಿಟರ್ ಕಂಪನಿಯೇ ಬಹಿರಂಗಪಡಿಸಿದೆ. ಇತ್ತೀಚೆಗಷ್ಟೇ ಪಾಶ್ಚಿಮಾತ್ಯ ಮಾಧ್ಯಮ ಕಂಪನಿಗಳ ಮೇಲಾದ ದಾಳಿಯ ಮಾದರಿಯಲ್ಲೇ ಟ್ವಿಟರ್ ಮೇಲೆ ಹ್ಯಾಕರ್ಗಳು ದಾಳಿ ಮಾಡಿದ್ದಾರೆ. ಸೈಬರ್ ದಾಳಿಕೋರರು ಟ್ವಿಟರ್ ಖಾತೆದಾರರ ಹೆಸರು, ಇ-ಮೇಲ್ ವಿಳಾಸಗಳು, ಪಾಸ್ವರ್ಡ್ಗಳು, ಇತರ ಮಾಹಿತಿಗಳನ್ನು ಕಲೆ ಹಾಕಿಕೊಂಡಿರಬಹುದು ಎಂಬ ಶಂಕೆಯನ್ನೂ ಟ್ವಿಟರ್ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಕೆಲವೊಂದು ಖಾತೆಗಳ ಪಾಸ್ವರ್ಡ್ಗಳನ್ನು ಅನರ್ಹಗೊಳಿಸಿದ್ದು, ಹೊಸ ಪಾಸ್ವರ್ಡ್ ರಚಿಸುವಂತೆ ಖಾತೆದಾರರಿಗೆ ಇ-ಮೇಲ್ ಸಂದೇಶ ರವಾನಿಸಲಾಗಿದೆ ಎಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.