ಆರೆಸ್ಸೆಸ್ ಸಮಾವೇಶ
ಮಂಗಳೂರಿನ ಕೆಂಜಾರಿನಲ್ಲಿ ಆರೆಸ್ಸೆಸ್‌ನ ಮಹಾ ಸಾಂಘಿಕ್ ಸಮಾವೇಶ. ಸರ ಸಂಘ ಚಾಲಕ ಮೋಹನ್ ಭಾಗವತ್ ಪಾಲ್ಗೊಳ್ಳುವ ಈ ಸಮಾವೇಶದಲ್ಲಿ 1 ಲಕ್ಷ ಗಣವೇಷಧಾರಿಗಳು ಪಾಲ್ಗೊಳ್ಳುವ ನಿರೀಕ್ಷೆ.
ಆಸೀಸ್, ವೆಸ್ಟ್‌ಇಂಡೀಸ್ ದ್ವಿತೀಯ ಏಕದಿನ
ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಆಸೀಸ್ ಹಾಗೂ ವೆಸ್ಟ್‌ಇಂಡೀಸ್ ನಡುವೆ ದ್ವಿತೀಯ ಏಕದಿನ ಪಂದ್ಯಾವಳಿ.
ಅಧಿವೇಶನ
ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭ. ಇದು ಶೆಟ್ಟರ್ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಅಧಿವೇಶನ.
ರಾಹುಲ್ ಪ್ರವಾಸ
ಕಾಂಗ್ರೆಸ್ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರಿಂದ ಸ್ವಕ್ಷೇತ್ರ ಉತ್ತರ ಪ್ರದೇಶದ ಅಮೇಠಿಗೆ ಎರಡು ದಿನಗಳ ಪ್ರವಾಸ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಮಾತುಕತೆ.
ಪ್ರಧಾನಿ ಸಭೆ
ವಿದ್ಯುತ್ ಪೂರೈಕೆ ಕಂಪನಿಗಳನ್ನು ನಷ್ಟದಿಂದ ಪಾರು ಮಾಡುವ ಸಂಬಂಧ ಪ್ರಧಾನಿ ಮನಮೋಹನ ಸಿಂಗ್ ಅವರಿಂದ ಎಲ್ಲಾ ರಾಜ್ಯಗಳ ವಿದ್ಯುತ್ ಸಚಿವರ ಜತೆ ಮಾತುಕತೆ.
ಒವೈಸಿ ಧ್ವನಿ ಮಾದರಿ ಸಂಗ್ರಹ
ಕೋಮುಧ್ವೇಷ ಬಿತ್ತುವ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಆಂಧ್ರಪ್ರದೇಶದ ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಅವರ ಧ್ವನಿ ಮಾದರಿ ಸಂಗ್ರಹ.
ವಿಎಚ್‌ಪಿ ಸಭೆ
ಅಲಹಾಬಾದ್‌ನ ಕುಂಭಮೇಳ ಮೈದಾನದಲ್ಲಿ ವಿಶ್ವ ಹಿಂದೂಪರಿಷತ್ ಕೇಂದ್ರೀಯ ಸಲಹಾ ಮಂಡಳಿ ಸಭೆ. ಮೂರು ದಿನಗಳ ಈ ಸಭೆಯಲ್ಲಿ ಹಿಂದುತ್ವವಾದಿ ಸಂಸತ್ತಿನ ಕುರಿತು ಚರ್ಚೆ ಸಾಧ್ಯತೆ.
ಮಹಾಕುಂಭಕ್ಕೆ ರಾಜನಾಥ್ ಸಿಂಗ್ ಭೇಟಿ
ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಂದ ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ. ವಿವಿಧ ಹಿಂದೂ ಸ್ವಾಮೀಜಿಗಳ ಭೇಟಿ.
ಆಸೀಸ್- ವೆಸ್ಟ್ ಇಂಡೀಸ್ ಕ್ರಿಕೆಟ್
ಆಸ್ಪ್ರೇಲಿಯಾದ ಕೆನ್‌ಬೆರ್ರಾದಲ್ಲಿ ಆಸೀಸ್ ಮತ್ತು ವೆಸ್ಟ್‌ಇಂಡೀಸ್ ನಡುವೆ ಮೂರನೇ ಏಕದಿನ ಪಂದ್ಯಾವಳಿ.
ರಾಜ್ಯ ಬಜೆಟ್
ರಾಜ್ಯ ಸರ್ಕಾರದಿಂದ ಪ್ರಸಕ್ತ ಸಾಲಿನ ಬಜೆಟ್ ಮಂಡನೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಡಿಸುತ್ತಿರುವ ಚೊಚ್ಚಲ ಬಜೆಟ್ ಇದು.
ಹೊಸ ಷೇರು ಮಾರುಕಟ್ಟೆ ಶುರು
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರಿಂದ ಹೊಸ ಷೇರುಮಾರುಕಟ್ಟೆ ಎಂಸಿಎಕ್ಸ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಚಾಲನೆ.
ಕನ್ನಡ ಸಾಹಿತ್ಯ ಸಮ್ಮೇಳನ
ಬಿಜಾಪುರದಲ್ಲಿ 79ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ. ಬೆಳಗ್ಗೆ 9 ಗಂಟೆಗೆ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಂದ ಮೂರು ದಿನಗಳ ಸಮ್ಮೇಳನದ ಮೆರವಣಿಗೆ ಉದ್ಘಾಟನೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.