ಕರ್ನಾಟಕದ ಕಲಾವಿದನಿಗೆ ಸ್ಕೋಡಾ ಕಲಾ ಪ್ರಶಸ್ತಿ
ನವದೆಹಲಿ: ಕರ್ನಾಟಕದ ಕಲಾವಿದ ಎಲ್.ಎನ್. ತಲ್ಲೂರ್ ಅವರು 2012ರ ಸ್ಕೋಡಾ ಕಲಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಯು 10 ಲಕ್ಷ ನಗದು ಹಾಗೂ ಸ್ಕೋಡಾ ಟ್ರೋಫಿಯನ್ನು ಒಳಗೊಂಡಿದೆ. ತಲ್ಲೂರ್ ಅವರ ಸಮಕಾಲೀನ ಕಲಾಕೃತಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಮೂವರು ಕಲಾವಿದರು ಹಾಗೂ ಕಲಾವಿದರ ಒಂದು ಗುಂಪು ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿತ್ತು. ಶುಕ್ರವಾರ ರಾತ್ರಿ ನವದೆಹಲಿಯಲ್ಲಿರುವ ಜೆಕ್ ರಾಯಭಾರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಆಫ್ರಿಕಾದ ಕಲಾವಿದ ವಿಲಿಯಂ ಕೆಂಟ್ರಿಡ್ಜ್ ಅವರು ತಲ್ಲೂರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ ವರ್ಷವೂ ತಲ್ಲೂರ್ ಸ್ಕೋಡಾ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿದ್ದರು. ಆದರೆ, ಪ್ರಶಸ್ತಿಯು ಕಲಾವಿದ ನವೀನ್ ಥಾಮಸ್ ಅವರ ಪಾಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.