ಮೀನೂ ಹೋಯ್ತು, ಬೋಟೂ ಹೋಯ್ತು
ಇದು ಮೀನು ಹಿಡಿಯಲು ಹೋಗಿ ಬೋಟ್ ಕಳೆದುಕೊಂಡ ವರ ಕಥೆ. ಇದು ನಡೆದದ್ದು ಪನಾಮಾದಲ್ಲಿ. ಬೋಟ್ ಮಾಲಿಕ ಮಾಮೂಲಿಯಂತೆ ಪನಾಮಾ ಕಾಲುವೆಗೆ ಇಳಿದಿದ್ದ. ಹೇಳಿ ಕೇಳಿ ಈ ಕಾಲುವೆ ಬ್ಲ್ಯಾಕ್ ಮರ್ಲಿನ್ ಮೀನುಗಳಿಗೆ ಹೆಸರುವಾಸಿ. ಬೋಟ್ ಒಂದಷ್ಟು ಕಿ.ಮೀ. ದೂರ ಪ್ರಯಾಣದ ಬಳಿಕ ಗಾಳಕ್ಕೆ ಯಾವುದೋ ಮೀನು ಸಿಕ್ಕಿಹಾಕೊಂಡಂತಾಯ್ತು. ಗಾಳವನ್ನು ಎಳೆದು ನೋಡಿದರೆ ಬ್ಲ್ಯಾಕ್ ಮರ್ಲಿನ್ ಮೀನು. ಬೋಟ್ ಮಾಲೀಕನಿಗೆ ಖುಷಿಯೋ ಖುಷಿ. ಆದರೆ, ಗಾಳಕ್ಕೆ ಸಿಕ್ಕಿಬಿದ್ದಿದ್ದೇನೆ ಎನ್ನುವುದು ಗೊತ್ತಾಗುತ್ತಿದ್ದಂತೆ ಆ ಮೀನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಿತು. ಹೇಳಿಕೇಳಿ ಅದು ಮನುಷ್ಯ ಗಾತ್ರದ ಮರ್ಲಿನ್. ಅದೇ ಹೊತ್ತಿಗೆ ದೊಡ್ಡದೊಂದು ಅಲೆಯೂ ಬಂತು. ಇದರಿಂದ ತಪ್ಪಿಸಿಕೊಳ್ಳುವ ವೇಳೆ ಬೋಟ್ ಅನ್ನು ತಿರುಗಿಸುವಾಗ ಕ್ಯಾಪ್ಟನ್ ಸಣ್ಣದೊಂದು ತಪ್ಪು ಮಾಡಿಬಿಟ್ಟ. ಅಷ್ಟೇ ಸಾಕಾಯ್ತು. ಈ ಕಡೆಯಿಂದ ಮೀನು ತನ್ನ ಎಲ್ಲಾ ಬಲಪ್ರಯೋಗಿಸಿ ಎಳೆದದ್ದರಿಂದ ಬೋಟ್ ಮಗುಚಿಬಿತ್ತು. ಈಗ ಬೋಟ್ ಮಾಲಿಕ ತಲೆಚಚ್ಚಿಕೊಳ್ಳುತ್ತಿದ್ದಾನೆ. ಆ ಕಡೆ ಮೀನೂ ಇಲ್ಲ. ಈ ಕಡೆ ಬೋಟೂ ಇಲ್ಲ ಎನ್ನುವಂತಾಗಿದೆ ಆತನ ಸ್ಥಿತಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.