ವಾಕ್ ವಾರ್
ದೆಹಲಿ ಸಿಎಂ ಶೀಲಾ ದೀಕ್ಷಿತ್ ಅವರು ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳ ಜತೆ ಸೇರಿ ವಿದ್ಯುತ್ ದರ ಏರಿಸಿದ್ದಾಗಿ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಆರೋಪಿಸಿದ್ದರು. ಇದಕ್ಕೆ ಶೀಲಾ ತಿರುಗೇಟು ನೀಡಿದ್ದು ಹೀಗೆ.
ಅರವಿಂದ ಕೇಜ್ರಿವಾಲ್: ಶೀಲಾ ದೀಕ್ಷಿತ್ ವಿದ್ಯುತ್ ವಿತರಣೆ ಕಂಪನಿಗಳ ಜತೆ ಸೇರಿಕೊಂಡು ದರ ಇಳಿಕೆಯಾಗದಂತೆ ನೋಡಿಕೊಂಡಿದ್ದಾರೆ. ಇದರಿಂದ ದೆಹಲಿಯಲ್ಲಿ ವಿದ್ಯುತ್ ದರ ದುಪ್ಪಟ್ಟಾಗಿದೆ. ಕಂಪನಿಗಳು 3,577 ಕೋಟಿ ಲಾಭ ಮಾಡಿಕೊಂಡಿವೆ.
ಶೀಲಾ ದೀಕ್ಷಿತ್ : ವಿದ್ಯುತ್ ದರ ಇಳಿಕೆಯಾಗದಂತೆ ನಾನು ವಿದ್ಯುತ್ ವಿತರಣಾ ಕಂಪನಿಗಳಿಗೆ ಸೂಚಿಸಿದ್ದೇನೆ ಎನ್ನುವಂತಹ ಆರೋಪ ಸತ್ಯಕ್ಕೆ ದೂರವಾದದ್ದು. ಅರವಿಂದ
ಕೇಜ್ರಿವಾಲ್ ಹೇಳುತ್ತಿರುವುದೆಲ್ಲ ಶುದ್ಧ ಸುಳ್ಳು.
ರೆಹಮಾನ್ ಮಲಿಕ್: ಬಾಲಿವುಡ್ ನಟ ಶಾರುಖ್ಖಾನ್ಗೆ ಭಾರತ ಸರ್ಕಾರ ಹೆಚ್ಚಿನ ಭದ್ರತೆ ನೀಡಬೇಕು. ಅವರಿಗೆ ಭಾರತದಲ್ಲಿರುವಷ್ಟೇ ಜನಪ್ರಿಯತೆ ಪಾಕ್ನಲ್ಲೂ ಇದೆ. ಅವರ ವಿರುದ್ಧ ದ್ವೇಷ ಸಾಧನೆ ಯಾಕೆ?
ಆರ್.ಕೆ. ಸಿಂಗ್: ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ. ನಮ್ಮ ಪ್ರಜೆಗಳನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ನಮಗಿದೆ. ಪಾಕಿಸ್ತಾನದ ಸಚಿವರು ಅವರ ದೇಶದ ಪ್ರಜೆಗಳ ರಕ್ಷಣೆ ಬಗ್ಗೆ ಆಲೋಚನೆ ಮಾಡಿದರೆ ಸಾಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.