ಒಬಾಮ ಗುರಿ ಯಾರು..?
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗನ್ ಹಿಡಿದಿದ್ದಾರೆ! ಆದರೆ, ಅವರೇನೂ ಉಗ್ರರ ವಿರುದ್ಧ ಹೋರಾಡಲೆಂದು ಗುರಿ ಇಟ್ಟಿದ್ದಲ್ಲ. ಸ್ಕೀಟ್ ಶೂಟಿಂಗ್ ಒಬಾಮ ಅವರ ಹವ್ಯಾಸವಂತೆ. ಹಾಗಾಗಿ ಸಮಯ ಸಿಕ್ಕಾಗ ಗನ್ ಹಿಡಿದು ಮಣ್ಣಿನಿಂದ ಮಾಡಿರುವ ಪಾರಿವಾಳವನ್ನು ಗುರಿಯಾಗಿಟ್ಟುಕೊಂಡು ಶೂಟ್ ಮಾಡುತ್ತಾರಂತೆ.
ಸೋಮವಾರ ಒಬಾಮ ಅವರು ಅಮೆರಿಕದಲ್ಲಿ ಗನ್ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ಘೋಷಿಸಲು ಅಣಿಯಾಗಿದ್ದಾರೆ. ಅಂತಹ ಸಮಯದಲ್ಲೇ ಒಬಾಮರ ಗನ್ ಹವ್ಯಾಸವನ್ನು ಪ್ರದರ್ಶಿಸುವ ಫೋಟೋವನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಈ ಫೋಟೋ ಒಬಾಮರ 51ನೇ ಜನ್ಮದಿನದವಾದ ಆಗಸ್ಟ್ 4ರಂದು ಕ್ಲಿಕ್ಕಿಸಿದ್ದಂತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.