ನ್ಯೂಟನ್‌ನ 300 ವರ್ಷಗಳಷ್ಟು ಹಳೆಯ ಪುಸ್ತಕ ಪತ್ತೆ
ಲಂಡನ್: ಇಂಗ್ಲೆಂಡ್‌ನ ಶಾಲೆಯೊಂದರ ಭೌತಶಾಸ್ತ್ರ ಲ್ಯಾಬೊರೇಟರಿಯಲ್ಲಿ ಗುರುತ್ವಾಕರ್ಷಣೆಗೆ ಸಂಬಂಧಿಸಿದ ಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರ ಪಠ್ಯಪುಸ್ತಕವೊಂದು ಪತ್ತೆಯಾಗಿದೆ.
ಸ್ಟಾಫೋರ್ಡ್ ಶೈರ್‌ನಲ್ಲಿರುವ ನ್ಯೂಕಾಸ್ಟಲ್ ಅಂಡರ್ ಲೈಮ್ ಸ್ಕೂಲ್‌ನ ಧೂಳು ತುಂಬಿದ ಲ್ಯಾಬೊರೇಟರಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಈ ಪುಸ್ತಕ ಪತ್ತೆಯಾಗಿದೆ. 300 ವರ್ಷಕ್ಕೂ ಹಳೆಯ ಈ ಪುಸ್ತಕವು ಸಾವಿರ ಪುಟಗಳನ್ನು ಒಳಗೊಂಡಿದೆ. ಮೂರು ಸಂಪುಟದಲ್ಲಿರುವ ಚಲನೆಯ ನಿಯಮಗಳು ಮತ್ತು ಗುರುತ್ವಾಕರ್ಷಣೆಯ ಸಿದ್ಧಾಂತ ಕುರಿತ ಈ ಪುಸ್ತಕಗಳು ನ್ಯೂಟನ್‌ನ ಚಿಂತನೆಯನ್ನು ಒಳಗೊಂಡಿದೆ. ಈ ಪುಸ್ತಕಗಳು 1874ರಿಂದ ಶಾಲೆಯಲ್ಲಿದ್ದ ವಿಜ್ಞಾನಿ, ಶಾಲಾ ಮುಖ್ಯೋಪಾಧ್ಯಾಯ ಎಲಿಯಟ್ ಕಿಚೆನರ್ ಅವರ ಸ್ವತ್ತು ಆಗಿರಬಹುದು ಎಂದು ನಂಬಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.