ಬಾಯಿ ಕ್ಯಾನ್ಸರ್: ವಿಶ್ವದ ಶೇ. 86ರಷ್ಟು ಪ್ರಕರಣ ಭಾರತದಲ್ಲಿ
ನವದೆಹಲಿ: ಭಾರತವು ವಿಶ್ವದ ಬಾಯಿ ಕ್ಯಾನ್ಸರ್ ರಾಜಧಾನಿಯಾಗಿ ಪರಿವರ್ತನೆಯಾಗುತ್ತಿದೆ. ವಿಶ್ವದ ಶೇ. 86ರಷ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲೇ ದಾಖಲಾಗಿವೆ. ಪ್ರತಿವರ್ಷ ಭಾರತದಲ್ಲಿ 75ರಿಂದ 85 ಸಾವಿರ ಮಂದಿ ಈ ಕ್ಯಾನ್ಸರ್ಗೆ ತುತ್ತಾಗುತ್ತಾರೆ ಎಂದು ವರದಿಯೊಂದು ಹೇಳಿದೆ. ದೇಶದಲ್ಲಿ ದಾಖಲಾಗುವ ಬಹುತೇಕ ಬಾಯಿ ಕ್ಯಾನ್ಸರ್ಗೆ ತಂಬಾಕು ಜಗಿಯುವಿಕೆಯೇ ಮುಖ್ಯ ಕಾರಣ. ಇತರೆ ದೇಶಗಳಲ್ಲಿ ತಂಬಾಕನ್ನು ಸಿಗರೇಟ್ ರೂಪದಲ್ಲಿ ಸೇದಿದರೆ ಭಾರತದಲ್ಲಿ ಮಾತ್ರ ಹೆಚ್ಚಿನವರು ಜಗಿಯುತ್ತಾರೆ. ತಂಬಾಕನ್ನು ಜಗಿಯುವ ವಿಶ್ವದ ಶೇ. 26ರಷ್ಟು, ತಂಬಾಕು ಸೇದುವ ಶೇ.14ರಷ್ಟು ಮಂದಿ ಭಾರತದಲ್ಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ದೇಶದ ಶೇ. 90ರಷ್ಟು ಬಾಯಿ ಕ್ಯಾನ್ಸರ್ಗೆ ಮೂಲ ಕಾರಣ ಜಗಿಯುವ ತಂಬಾಕು ಹಾಗೂ ಗುಟ್ಕಾ ಆಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.