ಜೇಟ್ಲಿ ಕರೆ ಮಾಹಿತಿ ಸಂಗ್ರಹ ಯತ್ನ: ಪೇದೆ ಬಂಧನ
ನವದೆಹಲಿ: ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ಮೊಬೈಲ್ ಕರೆ ಮಾಹಿತಿ ಪಡೆಯಲೆತ್ನ್ನಿದ ಪೊಲೀಸ್ ಪೇದೆಯೊಬ್ಬನನ್ನು ಶನಿವಾರ ಬಂಧಿಸಲಾಗಿದೆ. ಪೇದೆ ಅರವಿಂದ್ ದಬ್ಬಾಸ್ ಎಂಬಾತ ಅ್ನಸ್ಟೆಂಟ್ ಕಮಿಷನರ್‌ವೊಬ್ಬರ ಲಾಗಿನ್ ಐಡಿ, ಪಾಸ್‌ವರ್ಡ್ ಬಳ್ನ ಕರೆವಿವರ ಸಂಗ್ರಹಿಸಲು ಪ್ರಯತ್ನ್ನಿದ್ದಾನೆ. ಮೊಬೈಲ್ ಸೇವಾ ಸಂಸ್ಥೆ ನೀಡಿದ ಮಾಹಿತಿಯಂತೆ ದಬ್ಬಾಸ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಬ್ಬಾಸ್ ಕಳೆದ 5 ತಿಂಗಳಿಂದ ರಜೆಯಲ್ಲಿದ್ದಾನೆ. ಆತ ಯಾರ ಸೂಚನೆಯಂತೆ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಬಹಿರಂಗವಾಗಿಲ್ಲ. ತಾನು ವೈಯಕ್ತಿಕ ಉದ್ದೇಶಕ್ಕಾಗಿ ಹೀಗೆ ಮಾಡಿದೆ ಎಂದು ಆತ ತಿಳ್ನಿದ್ದಾನೆ.
ಬಿಜೆಪಿ ಆಕ್ರೋಶ: ಘಟನೆ ಕುರಿತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡ್ನಿದೆ. ಪೊಲೀಸ್ ಪೇದೆಯ ಹಿಂದೆ ಯಾರಿದ್ದಾರೆ ಎಂಬ ಮಾಹಿತಿಯನ್ನು ಗೃಹ ಸಚಿವ ಶಿಂದೆ ಬಹಿರಂಗಪಡಿಸಬೇಕು ಎಂದು ಆಗ್ರಹ್ನಿದೆ. ನಾವು ಇದನ್ನು ಸಂಸತ್ತಿನಲ್ಲಿ ಪ್ರಶ್ನಿಸುತ್ತೇವೆ ಎಂದೂ ಹೇಳಿದೆ.