ಆಕರ್ಷಣೆ ಪತ್ತೆಗೂ ಆ್ಯಪ್!
ನಿಮ್ಮನ್ನು ಯಾರೋ ಪದೇ ಪದೆ ತಿರುಗಿ ನೋಡುತ್ತಿರುತ್ತಾರೆ, ಸುಮ್ನೆ ಸುಮ್ನೆ ನಕ್ಕಿರುತ್ತಾರೆ. ಹಾಗಂತ ಅವರು ನಿಮಗೆ ಮನಸೋತಿದ್ದಾರೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲವಲ್ಲ. ಹಾಗಿದ್ದರೆ ಅವರು ನಿಮಗೆ ಮನಸೋತಿದ್ದಾರಾ, ಇಲ್ವಾ ಅಂತ ತಿಳಿದುಕೊಳ್ಳುವುದು ಹೇಗೆ? ನಿಮ್ಮ ಈ ಸಮಸ್ಯೆ ದೂರಮಾಡಲೆಂದೇ ವಿಜ್ಞಾನಿಗಳು ಹೊಸತೊಂದು ಆ್ಯಪ್ ್ನದ್ಧಪಡ್ನಿದ್ದಾರೆ. ಇದು ವ್ಯಕ್ತಿಯ ಮುಖ ಹಾಗೂ ಹೃದಯದ ಬಡಿತ ಹಾಗೂ ಉ್ನರಾಟವನ್ನು ಅರ್ಥಮಾಡಿ ಕೊಂಡು ಅವರು ನಿಮ್ಮತ್ತ ಆಕರ್ಷಿತರಾಗಿದ್ದಾರಾ ಅಂತ ಹೇಳುತ್ತದಂತೆ. ಈ ಆ್ಯಪ್ ಅನ್ನು ್ನದ್ಧಪಿಡ್ನಿದ್ದು ಫಿಲಿಫ್ಸ್ ಸಂಸ್ಥೆ. ಇದು ಶೇ.99ರಷ್ಟು ನಿಖರ ಫಲಿತಾಂಶ ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಮೊಬೈಲ್‌ನಲ್ಲಿರುವ ಕ್ಯಾಮೆರಾವನ್ನು ನೀವು ಇಷ್ಟಪಡುವ ವ್ಯಕ್ತಿಯ ಮುಂದಿಟ್ಟರೆ ಸಾಕು. ಅದು ಆ ವ್ಯಕ್ತಿಯ ಹೃದಯ ಬಡಿತ, ಮುಖಲಕ್ಷಣದಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಓದಿಕೊಳ್ಳುತ್ತದೆ. ನಂತರ ಅದರ ಆಧಾರದ ಮೇಲೆ ಅವರು ನಿಜವಾಗಿಯೂ ನಿಮ್ಮತ್ತ ಆಕರ್ಷಿತರಾಗಿದ್ದಾರೆಯೇ ಎನ್ನುವುದನ್ನು ತಿಳಿಸುತ್ತದೆ.