ಚಿನ್ನದ ದರ 6 ತಿಂಗಳಲ್ಲೇ ಭಾರಿ ಇಳಿಕೆ
ಬೆಂಗಳೂರು/ಮುಂಬೈ: ಚಿನ್ನ ಕೊಳ್ಳುವ ಇಚ್ಛೆಯುಳ್ಳವರಿಗೆ ಇದು ಸದವಕಾಶ. ಚಿನ್ನದ ದರ ಕಳೆದ 6 ತಿಂಗಳಲ್ಲೇ ಅತ್ಯಧಿಕ ಇಳಿಕೆಯಾಗಿದೆ. ಬೆಂಗಳೂರು ಚಿನಿವಾರ ಪೇಟೆಯಲ್ಲಿ ಶನಿವಾರ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 30,315, ಆಭರಣ ಚಿನ್ನ ಗ್ರಾಂಗೆ 2,804 ಆಗಿತ್ತು. ಅಂದರೆ, ಒಂದೇ ದಿನದಲ್ಲಿ ಚಿನ್ನದ ದರ 10ಗ್ರಾಂಗೆ 231 ಇಳಿಕೆಯಾಗಿದೆ. ಮದುವೆ, ಹಬ್ಬದ ಋತು ಮುಗಿದ ಹಿನ್ನೆಲೆಯಲ್ಲಿ ಬೇಡಿಕೆ ತಗ್ಗಿದ್ದು, ಪರಿಣಾಮ ಹಳದಿ ಲೋಹದ ದರ ಭಾರಿ ಇಳಿಕೆ ಕಂಡಿದೆ. ಮುಂಬೈನಲ್ಲಿ ಸ್ಟ್ಯಾಂ. ಚಿನ್ನ 10ಗ್ರಾಂಗೆ 29,890 ಆಗಿದ್ದು, ಶುದ್ಧ ಚಿನ್ನದ ದರ 30,030 ಆಗಿದೆ.