ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಡೀಲ್‌ನಲ್ಲಿ ಮತ್ತೊಬ್ಬ ಸೇನಾಧಿಕಾರಿ?

Parashurama
Updated On : 16 Feb 2013, 9:57 am

ನವದೆಹಲಿ: ಆಗಸ್ಟವೆಸ್ಟ್‌ಲ್ಯಾಂಡ್ ಕಾಪ್ಟರ್ ಹಗರಣಕ್ಕೆ ಸಂಬಂಧ್ನಿದ ತನಿಖೆಯು ಭಾರತೀಯ ಸೇನೆಯ ಇನ್ನಷ್ಟು ಅಧಿಕಾರಿಗಳ ಬಣ್ಣ ಬಯಲು ಮಾಡುವ ಸಾಧ್ಯತೆ ಇದೆ.
ನಿವೃತ್ತ ಏರ್‌ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ ಸಹೋದರರ ಹೊರತಾಗಿ ಸೇನೆಯ ಮತ್ತೊಬ್ಬ ವ್ಯಕ್ತಿಗೂ ಲಂಚ ನೀಡಲಾಗಿದೆ ಎಂದು ಇಟಲಿಯ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಡೀಲ್‌ಗೆ ಸಂಬಂಧ್ನಿ ಭಾರತೀಯ ಸೇನೆಯ ಪ್ರಮುಖ ವ್ಯಕ್ತಿಯೊಬ್ಬರ ಜತೆಗೂ ಚರ್ಚೆ ನಡ್ನೆದ ಕುರಿತು ಮಧ್ಯವರ್ತಿ ಗಿಡೋ ಹಷ್ಕೆ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳ್ನಿದ್ದಾನೆ.
 ಆದರೆ, ಇವರು ನಿವೃತ್ತ ಏರ್‌ಚೀಫ್ ಮಾರ್ಷಲ್ ತ್ಯಾಗಿಯಲ್ಲ. ಬದಲಾಗಿ ಸೇನೆಯ ಇನ್ನೊಬ್ಬ ಪ್ರಮುಖ ವ್ಯಕ್ತಿ ಆಗಿರಬಹುದೆಂಬುದು ಇಟಲಿಯ ತನಿಖಾಧಿಕಾರಿಗಳ ಶಂಕೆಯಾಗಿದೆ. ಈ ನಡುವೆ, ಇಟಲಿಯ ತನಿಖಾ ವರದಿಯಲ್ಲಿ ಕುಟುಂಬವೊಂದರ ಕುರಿತು ಉಲ್ಲೇಖಿಸಲಾಗಿದೆ. ಡೀಲ್‌ನಿಂದ ಈ ಕುಟುಂಬಕ್ಕೆ ಲಾಭವಾಗಿದೆ ಎಂದು ಹೇಳಲಾಗಿದೆ.

ಬ್ರಿಟನ್ ಪ್ರಧಾನಿ ಭೇಟಿ ವೇಳೆ ಕಾಪ್ಟರ್ ಸದ್ದು?
ಹೆಲಿಕಾಪ್ಟರ್ ಹಗರಣದ ಕರಿಛಾಯೆಯ ನಡುವೆಯೇ ಬ್ರಿಟನ್ ಪ್ರಧಾನಿ ಡೇವಿಡ್ ಕೆಮೆರಾನ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಡೀಲ್ ಕುದುರಿಸಲು ಲಂಚ ನೀಡಿದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಈಗಾಗಲೇ ಆಗಸ್ಟ ಜತೆಗಿನ ಒಪ್ಪಂದ ರದ್ದು ಮಾಡುವ ಪ್ರಕ್ರಿಯೆ ಆರಂಭ್ನಿದೆ. ಒಂದು ವೇಳೆ ಈ ಡೀಲ್ ರದ್ದಾದರೆ ಬ್ರಿಟನ್‌ನ ಯೂರೋಕಾಪ್ಟರ್ ಅನ್ನು ಪರಿಗಣಿಸುವ ಕುರಿತು ಕೆಮೆರಾನ್ ಭಾರತಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

ಹೊಸ ವಿವಾದದಲ್ಲಿ ಆಗಸ್ಟ ವೆಸ್ಟ್‌ಲ್ಯಾಂಡ್?
ಆಗಸ್ಟ ಸಂಸ್ಥೆ ಇನ್ನೊಂದು ಹಗರಣದಲ್ಲಿ ್ನಲುಕುವ ಸಾಧ್ಯತೆ ಇದೆ. ದೆಹಲಿ ಪೊಲೀಸರ ಜತೆಗಿನ ಹೆಲಿಕಾಪ್ಟರ್ ಮತ್ತು ಬಿಡಿಭಾಗಗಳ ಪೂರೈಕೆ ಡೀಲ್ ಕುದುರಿದರೆ ಕಮಿಷನ್ ನೀಡುವುದಾಗಿ ಸಂಸ್ಥೆಯು ಅಮೆರಿಕ ಮೂಲದ ಕಂಪನಿಯೊಂದಕ್ಕೆ ಆಮಿಷ ನೀಡಿತ್ತು. ಈ ಒಪ್ಪಂದ ನಡೆದರೆ ಕಾಪ್ಟರ್ ಮಾರಾಟದಲ್ಲಿ ಶೇ.8, ಬಿಡಿಭಾಗ ಪೂರೈಕೆಯಲ್ಲಿ ಶೇ.15 ಕಮಿಷನ್ ನೀಡುವುದಾಗಿ ನ್ಯೂಯಾರ್ಕ್‌ನ ಗಾಂಟನ್ ಲಿಮಿಟೆಡ್ ಕಂಪನಿ ಹಾಗೂ ವಿವಾದಾತ್ಮಕ ಉದ್ಯಮಿ ಅಭಿಷೇಕ್ ವರ್ಮಾನಿಗೆ ತಿಳ್ನಿತ್ತು ಎನ್ನಲಾಗಿದೆ. ಆದರೆ, ಈ ಡೀಲ್ ಕುದುರಲೇ ಇಲ್ಲ.

ರಾಜಕೀಯ ಮಾಡಬೇಡಿ: ಖುರ್ಷಿದ್
ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧ್ನಿ ಪ್ರತಿಪಕ್ಷಗಳು ವಿನಾಕಾರಣ ರಾಜಕೀಯ ಮಾಡಬಾರದು. ವಿವಾದದ ತನಿಖೆಗೆ ಯುಪಿಎ ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ತಿಳ್ನಿದ್ದಾರೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ಹಾಗಾಗಿ ಯಾವುದೇ ಪಕ್ಷ ಇದರಲ್ಲಿ ರಾಜಕೀಯ ಎಳೆದು ತರಬಾರದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement