'ಪ್ರಧಾನಿ ಅಭ್ಯರ್ಥಿಯಾಗಿ' ಎಂದ ಬಹುಗುಣಗೆ ರಾಹುಲ್ ತರಾಟೆ
ನವದೆಹಲಿ: ನಾನು ಪ್ರಧಾನಿ ಅಭ್ಯರ್ಥಿ ಆಗಬೇಕೇ, ಬೇಡವೇ ಎನ್ನುವ ಕುರಿತು ನಂತರ ಯೋಚಿಸೋಣ. ಮೊದಲು ಪಕ್ಷ ಬಲವರ್ಧನೆಗೆ ಶ್ರಮಿಸೋಣ...!
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ಸೇರಿ ಇತರೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡದ್ದು ಹೀಗೆ.
ಶನಿವಾರ ಕಾಂಗ್ರೆಸ್ ್ನಎಂಗಳು ಹಾಗೂ ಪ್ನ್ನಿ ಅಧ್ಯಕ್ಷರ ಸಭೆಯಲ್ಲಿ ರಾಹುಲ್ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲಿ ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ರೀತಿ ತಮ್ಮ ಆಕ್ರೋಶ ವ್ಯಕ್ತಪಡ್ನಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆ ದೊಡ್ಡ ಸಮಸ್ಯೆಯಲ್ಲ, ಬದಲಾಗಿ ಪಕ್ಷವನ್ನು ಹೇಗೆ ಬಲವರ್ಧನೆಗೊಳಿಸುವುದು ಎನ್ನುವುದೇ ನಮ್ಮ ಮುಂದಿರುವ ಸವಾಲು ಎಂದು ರಾಹುಲ್ ತಿಳ್ನಿದ್ದಾರೆ. ಈ ರೀತಿಯ ಬೇಡಿಕೆ ಮತ್ತೊಮ್ಮೆ ತಮ್ಮ ಕಿವಿಗೆ ಕೇಳಬಾರದು ಎಂದೂ ಅವರು ಮುಖಂಡರಿಗೆ ತಾಕೀತು ಮಾಡಿದ್ದಾರೆ.
ಕಚೇರಿಯಿಂದ ಹೊರಬನ್ನಿ: ಇದೇ ವೇಳೆ, ಪ್ನ್ನಿ ಅಧ್ಯಕ್ಷರು ತಿಂಗಳಲ್ಲಿ ಕನಿಷ್ಠ 10 ದಿನವಾದರೂ ಪ್ರವಾಸ ಮಾಡಬೇಕು. ಜಿಲ್ಲೆ, ಬ್ಲಾಕ್ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ ಆಲಿಸಬೇಕು. ಪಕ್ಷದ ಸಂಘಟನೆ ಬಲಪಡಿಸಬೇಕು ಎಂದು ಸೂಚ್ನಿದ್ದಾರೆ. ಅಲ್ಲದೆ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ರಚನೆಗೆ 2 ತಿಂಗಳ ಗಡುವನ್ನೂ ಅವರು ಇದೇ ವೇಳೆ ಪ್ನ್ನಿ ಅಧ್ಯಕ್ಷರಿಗೆ ನೀಡಿದ್ದಾರೆ.