ಉಲ್ಕೆ ಸ್ಫೋಟ ಅಣುಬಾಂಬ್ಗಿಂತ ಶಕ್ತಿಯುತ
ಮಧ್ಯ ರಷ್ಯಾದ ಆಗಸದಲ್ಲಿ ಶುಕ್ರವಾರ...
ನ್ಯೂಯಾರ್ಕ್: ಮಧ್ಯ ರಷ್ಯಾದ ಆಗಸದಲ್ಲಿ ಶುಕ್ರವಾರ ಸ್ಫೋಟಿಸಿದ ಉಲ್ಕೆಯು ಹಿರೋಶಿಮಾದಲ್ಲಿ ಸಿಡಿದ ಅಣುಬಾಂಬ್ಗಿಂತ 30 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ರಷ್ಯಾದ ಉರಾಲ್ಸ್ ಪರ್ವತ ಶ್ರೇಣಿಯಲ್ಲಿ 50 ಅಡಿಯ ಕಲ್ಲುತುಂಡು 10 ಸಾವಿರ ಟನ್ ದ್ರವ್ಯರಾಶಿಯೊಂದಿಗೆ ಆಗಸದಲ್ಲಿ ಸ್ಫೋಟಿಸಿದೆ. ಈ ವೇಳೆ ಅದು 500 ಕಿಲೋಟನ್ನಷ್ಟು ಶಕ್ತಿ ಬಿಡುಗಡೆ ಮಾಡಿದೆ. ಸ್ಫೋಟದ ತೀವ್ರತೆಗೆ 1200 ಮಂದಿ ಗಾಯಗೊಂಡರೆ, ಸಾವಿರಾರು ಮನೆಗಳಿಗೆ ಹಾನಿಯಾಗಿದೆ.