ಟಾಟಾ ಹಗರಣ: ತನಿಖೆ ಚುರುಕು
ನವದೆಹಲಿ: ಟಾಟ್ರಾ ಟ್ರಕ್ ಹಗರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ. ಹಗರಣ ಸಂಬಂಧ ಮಾಹಿತಿ ಕೋರಿ ಜಾರಿ ನಿರ್ದೇಶನಾಲಯವು ಬ್ರಿಟನ್ ಹಾಗೂ ಹಾಂಕಾಂಗ್ ಸರ್ಕಾರಗಳಿಗೆ ನ್ಯಾಯಾಂಗ ಬೇಡಿಕೆಯನ್ನು ಸಲ್ಲಿಸಿದೆ. ಹಗರಣದಲ್ಲಿ ಭಾಗಿಯಾಗಿರುವ ಟಾಟ್ರಾ ಸಿಪೋಕ್ಸ್ ಕಂಪನಿ ಬ್ರಿಟನ್ನಲ್ಲಿದ್ದು, ಈ ಕಂಪನಿಯಲ್ಲಿ ಶೇ.50ರಷ್ಟು ಷೇರು ಹೊಂದಿರುವ ವೀನಸ್ ಪ್ರಾಜೆಕ್ಟ್ಸ್ ಹಾಂಕಾಂಗ್ನಲ್ಲಿದೆ. ಹೀಗಾಗಿ ಈ ಎರಡೂ ರಾಷ್ಟ್ರಗಳಿಗೆ ಪತ್ರ ಕಳುಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ. ಟಾಟ್ರಾ ಟ್ರಕ್ ಖರೀದಿಗಾಗಿ 14 ಕೋಟಿ ಲಂಚದ ಆಮಿಷವೊಡ್ಡಲಾಗಿತ್ತು ಎಂದು ಭೂಸೇನೆಯ ಮಾಜಿ ಮುಖ್ಯಸ್ಥ ಜ.ವಿ.ಕೆ. ಸಿಂಗ್ ಆರೋಪಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷದ ಏಪ್ರಿಲ್ನಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು. ವೆಕ್ಟ್ರಾ ಮುಖ್ಯಸ್ಥ ರವಿ ರಿಷಿ ಹಾಗೂ ಇತರ ಕಂಪನಿಗಳ ವಿರುದ್ಧವೂ ಕೇಸು ದಾಖಲಾಗಿತ್ತು.