ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಿದ್ದೆ ಬರದ ಪೋರ ಪೊಲೀಸರ ಕರೆದ!

Parashurama
Updated On : 23 Feb 2013, 6:27 am

ಮಕ್ಕಳನ್ನು ನಿದ್ದೆ ಮಾಡಿಸಲು ಹೆತ್ತವರು ಪಡುವ ಪಡಿಪಾಟಲು ಅಷ್ಟಿಷ್ಟಲ್ಲ...  ಅದು ಕೊಡಿಸುತ್ತೇನೆ, ಇದು ಕೊಡಿಸುತ್ತೇನೆ ಎಂದು ಮಕ್ಕಳನ್ನು ನಂಬಿಸಿ, ನಂಬದಿದ್ದರೆ ಭೂತ ಬರುತ್ತದೆಂದು ಹೆದರಿಸಿಯಾದರೂ ಅವರನ್ನು ನಿದ್ರೆಗೆ ಜಾರುವಂತೆ ಮಾಡುವಷ್ಟರಲ್ಲಿ ತಾಯಿಗೆ ಸುಸ್ತೋ ಸುಸ್ತು. ಏನೇ ಇರಲಿ, ಎಷ್ಟು ಹಟ ಮಾಡಿದರೂ ಕೊನೆಗೆ ನಿಧಾನವಾಗಿ ಮಗು ನಿದ್ರಾದೇವಿಗೆ ಶರಣಾಗುವುದಂತೂ ನಿಜ. ಆದರೆ, ಅಮೆರಿಕದಲ್ಲೊಂದು ಚಾಣಾಕ್ಷ ಬಾಲಕ ಏನು ಮಾಡಿದ್ದಾನೆ ಗೊತ್ತಾ? ನಿದ್ದೆ ಮಾಡುವುದಿಲ್ಲವೆಂದು ಹಟ ಹಿಡಿದಿದ್ದಷ್ಟೇ ಅಲ್ಲ, ಪೊಲೀಸರಿಗೆ ಕರೆ ಮಾಡಿ ತನ್ನ ತಾಯಿ ವಿರುದ್ಧ ದೂರನ್ನೂ ಕೊಟ್ಟಿದ್ದಾನೆ. ರಾತ್ರಿ 8ರವೇಳೆಗೆ ಕರೆ ಮಾಡಿದ 10 ವರ್ಷದ ಬಾಲಕ, 'ನನಗೆ ನಿದ್ದೆ ಬರುತ್ತಿಲ್ಲ. ಆದರೆ ಅಮ್ಮ ನಿದ್ದೆ ಮಾಡೆಂದು ಒತ್ತಾಯಿಸುತ್ತಿದ್ದಾಳೆ' ಎಂದು ದೂರು ನೀಡಿದ್ದಾನೆ. ನಂತರ ಪೊಲೀಸ್ ಅಧಿಕಾರಿಯೊಬ್ಬರು ಮನೆಗೆ ಬಂದು ಆತನನ್ನು ಸಮಾಧಾನಪಡಿಸಿ, ಪೊಲೀಸರಿಗೆ ಯಾವಾಗ ಕರೆ ಮಾಡಬೇಕು ಎಂಬುದನ್ನು ತಿಳಿಸಿ ಹೋಗಿದ್ದಾರೆ. ಎಂತೆಂಥಾ ಮಕ್ಕಳಿದ್ದಾರೆ ಅಲ್ಲವೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement