ರೈಲು ಆಮದು?
ನವದೆಹಲಿ: ಅಪಘಾತ ಸಂಭವಿಸಿದಾಗ ರಕ್ಷಣಾ ಹಾಗೂ ಪರಿಹಾರ ಕಾರ್ಯ ತ್ವರಿತಗೊಳಿಸುವ ನಿಟ್ಟಿನಲ್ಲಿ ಹೈಸ್ಪೀಡ್ ಸ್ವಉತ್ತೇಜಿತ ಅಪಘಾತ ಪರಿಹಾರ ರೈಲುಗಳನ್ನು ಯುರೋಪ್ನಿಂದ ಆಮದು ಮಾಡಿಕೊಳ್ಳಲು ರೇಲ್ವೆ ಇಲಾಖೆ ಚಿಂತನೆ ನಡೆಸಿದೆ. ಪ್ರಸ್ತುತ ರೇಲ್ವೆಯು ಗಂಟೆಗೆ 110 ಕಿ.ಮೀ. ಸಂಚರಿಸುವ ಇಂತಹ 27 ರೈಲುಗಳನ್ನು ಹೊಂದಿದೆ.