ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸೂರ್ಯನೆಲ್ಲಿ ಪ್ರಕರಣ: ಕುರಿಯನ್ ವಿರುದ್ಧ ದೂರು ದಾಖಲು

ಸೂರ್ಯನೆಲ್ಲಿ ಗ್ಯಾಂಗ್‌ರೇಪ್ ಪ್ರಕರಣ ಮತ್ತೆ...

Parashurama
Updated On : 23 Feb 2013, 1:55 am

ಕೊಟ್ಟಾಯಂ: ಸೂರ್ಯನೆಲ್ಲಿ ಗ್ಯಾಂಗ್‌ರೇಪ್ ಪ್ರಕರಣ ಮತ್ತೆ ತೀವ್ರತೆ ಪಡೆದುಕೊಂಡಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಶುಕ್ರವಾರ ರಾಜ್ಯಸಭೆ ಉಪಸಭಾಪತಿ ಪಿ.ಜೆ. ಕುರಿಯನ್ ಅವರ ವಿರುದ್ಧ ಚಿಂಗವಾನಮ್ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ದೂರು ದಾಖಲಿಸಿದ್ದಾರೆ. ಜತೆಗೆ, ಉನ್ನಿಕೃಷ್ಣನ್ ಹಾಗೂ ಜಮಾಲ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಕೇಸು ದಾಖಲಿಸಲು ಮಹಿಳೆಯ ಜತೆಗೆ ಆಕೆಯ ಹೆತ್ತವರೂ ಆಗಮಿಸಿದ್ದರು.
 ಇದೇ ವೇಳೆ, ಸೂರ್ಯನೆಲ್ಲಿ ಪ್ರಕರಣ ಸಂಬಂಧ ಎಡಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿರುವ ಕುರಿಯನ್ ಅವರು ಶುಕ್ರವಾರ ನಿರಾತಂಕವಾಗಿ ರಾಜ್ಯಸಭೆಯಲ್ಲಿ ತಮ್ಮ ಸ್ಥಾನವನ್ನು ಅಲಂಕರಿಸಿದ್ದರು. ವಿಶೇಷವೆಂದರೆ, ಕುರಿಯನ್ ಉಪಸ್ಥಿತಿಗೆ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement