ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹೊಸ ಬ್ಯಾಂಕುಗಳ ಸ್ಥಾಪನೆಗೆ ಆರ್‌ಬಿಐ ಮಾರ್ಗಸೂಚಿ ಪ್ರಕಟ

ಹೊಸ ಬ್ಯಾಂಕಿಂಗ್ ಲೈಸೆನ್ಸ್‌ಗಳ ವಿತರಣೆಗೆ...

Parashurama
Updated On : 23 Feb 2013, 1:54 am

ಮುಂಬೈ: ಹೊಸ ಬ್ಯಾಂಕಿಂಗ್ ಲೈಸೆನ್ಸ್‌ಗಳ ವಿತರಣೆಗೆ ಸಂಬಂಧಿಸಿದ ಅಂತಿಮ ಮಾರ್ಗಸೂಚಿಯನ್ನು ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದೆ. ಈ ಮೂಲಕ ಎಲ್‌ಐಸಿ, ಅಂಚೆ ಇಲಾಖೆ ಸೇರಿದಂತೆಖಾಸಗಿ ಹಾಗೂ ಸಾರ್ವಜನಿಕ ವಲಯಗಳಿಗೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಬ್ಯಾಂಕ್ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಒಟ್ಟು ಎಷ್ಟು ಲೈಸೆನ್ಸ್‌ಗಳನ್ನು ವಿತರಿಸಲಾಗುವುದು ಎಂಬ ಬಗ್ಗೆ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿಲ್ಲ. ಅರ್ಜಿ ಸಲ್ಲಿಸಲು ಜು. 1 ಕೊನೇ ದಿನಾಂಕವಾಗಿದೆ. ಇದೇ ವೇಳೆ, ಹೊಸ ಬ್ಯಾಂಕುಗಳು ಶೇ.25ರಷ್ಟು ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲೇ ಸ್ಥಾಪಿಸಬೇಕು ಎಂದೂ ಆದೇಶಿಸಲಾಗಿದೆ. ಹೊಸ ಬ್ಯಾಂಕುಗಳಲ್ಲಿ ಶೇ.49ರಷ್ಟು ಮಾತ್ರವೇ ವಿದೇಶಿ ಬಂಡವಾಳ ಇರಬಹುದು ಹಾಗೂ ಕನಿಷ್ಠ ಷೇರು ಬಂಡವಾಳ 500 ಕೋಟಿ ಎಂದೂ ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement