500 ಕಿ.ಮೀ. ಉದ್ದದ ರೇಲ್ವೆ ಲೈನ್ ಈ ವರ್ಷವೇ ಪೂರ್ಣ
2013-14ರ ಅವಧಿಗೆ ರೇಲ್ವೆ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಅನೇಕ ಗುರಿಗಳನ್ನು ಹಾಕಿಕೊಂಡಿದ್ದಾರೆ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್. 500 ಕಿ.ಮೀ.ನಷ್ಟು ಉದ್ದದ ಹೊಸ ರೇಲ್ವೆ ಲೈನ್‌ಗಳ ನಿರ್ಮಾಣ ಕಾಮಗಾರಿ ಯನ್ನು ಈ ವರ್ಷವೇ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ, ಈ ಅವಧಿಯಲ್ಲಿ 450 ಕಿ.ಮೀ.ನಷ್ಟು ಎಂಜಿ/ಎನ್‌ಜಿ ಲೈನ್‌ಗಳನ್ನು ಬ್ರಾಡ್‌ಗೇಜ್‌ಗಳನ್ನಾಗಿ ಪರಿವರ್ತಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. ಪ್ರಸಕ್ತ ವರ್ಷ 750 ಕಿ.ಮೀ.ನಷ್ಟು ಹಳಿಗಳನ್ನು ದುಪ್ಪಟ್ಟುಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದೇ ವೇಳೆ, ವಿವಿಧ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳನ್ನು ಹೆಚ್ಚಿಸಲಾಗಿದೆ. ಧಾರ್ಮಿಕ ತಾಣಗಳಲ್ಲಿ ಜನಜಂಗುಳಿ ಅಧಿಕವಾಗಿರುತ್ತದೆ. ಹಾಗಾಗಿ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೆಚ್ಚು ರೈಲುಗಳನ್ನು ಘೋಷಿಸಲಾಗಿದೆ.