ಪ್ರಸ್ತಾಪಿತ ಕಾರ್ಯಕ್ರಮಗಳು
ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಮತ್ತು 10 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಓಡಾಡುವ 104 ರೇಲ್ವೆ ನಿಲ್ದಾಣಗಳನ್ನು ಗುರುತಿಸಿ, ಅಲ್ಲಿ ಸ್ವಚ್ಛತೆಗೆ ಪೂರಕವಾದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸುವುದು.
ಪರಿಸರ ಸ್ನೇಹಿ ಶೌಚಾಲಯಗಳನ್ನು ಸಾಧ್ಯವಾದಷ್ಟು ಹೆಚ್ಚು ರೈಲುಗಳಲ್ಲಿ ಅಳವಡಿಸುವುದು.
ರೇಲ್ವೆ ನಿಲ್ದಾಣದಗಳಲ್ಲಿ ಕಾಂಕ್ರಿಟ್ ಕವಚ ಅಳವಡಿಸಿ ಯಾಂತ್ರೀಕೃತ ಸ್ವಚ್ಛತಾ ವ್ಯವಸ್ಥೆಯನ್ನು ಅಳವಡಿಸುವುದು. ಈಗಾಗಲೇ 200 ರೇಲ್ವೆ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇದೆ.
ರೈಲಿನೊಳಗಿನ ಸ್ವಚ್ಛತಾ ಯೋಜನೆ ಮತ್ತು ಸ್ವಚ್ಛ ರೈಲು ನಿಲ್ದಾಣ ಕಾರ್ಯಕ್ರಮಗಳನ್ನು ವಿಸ್ತರಿಸುವುದು.
ಮುಂಗಡ ಟಿಕೆಟ್ ಕಾಯ್ದಿರಿಸುವ ಪದ್ಧತಿ ಅಲ್ಲದ ವ್ಯವಸ್ಥೆ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಅಳವಡಿಕೆ, ನಾಣ್ಯಗಳ ಮೂಲಕ ನಿರ್ವಹಿಸಬಹುದಾದ ಟಿಕೆಟ್ ನೀಡುವ ಯಂತ್ರಗಳ ಸ್ಥಾಪನೆ ಹಾಗೂ ಜನ ಸಾಧಾರಣ ಟಿಕೆಟ್ ಬುಕಿಂಗ್ ವ್ಯವಸ್ಥೆ ಜಾರಿಗೆ ತರುವುದು.
ವಿಜಯವಾಡ, ನಾಗ್ಪುರ, ಲಲಿತ್ಪುರ, ಬಿಲಾಸ್ಪುರ್, ಜೈಪುರ್ ಮತ್ತು ಅಹಮದಾಬಾದ್ಗಳಲ್ಲಿ ರೈಲ್ ನೀರ್ ಬಾಟ್ಲಿಂಗ್ ಘಟಕಗಳನ್ನು ಸ್ಥಾಪಿಸುವುದು.
ರೈಲಿನೊಳಗಿನ ಸಿಬ್ಬಂದಿಯನ್ನು ಪ್ರಯಾಣಿಕರು ಎಸ್ಎಂಎಸ್, ಫೋನ್ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಕೆಲವು ರೈಲುಗಳಲ್ಲಿ ಪ್ರಾಯೋಗಿಕವಾಗಿ ಜಾರಿ.
ರೈಲಿನಲ್ಲಿ ಬಳಕೆ ಮಾಡುವ ಬಟ್ಟೆಗಳನ್ನು ಗುಣಮಟ್ಟದಲ್ಲಿ ಒಗೆಯಲು 8ರಿಂದ 10 ಯಾಂತ್ರೀಕೃತ ಲಾಂಡ್ರಿಗಳ ಸ್ಥಾಪನೆ.
ಮುಂದಿನ ರೇಲ್ವೆ ನಿಲ್ದಾಣ, ರೈಲುಗಳ ಓಡಾಟ, ಫ್ಲಾಟ್ಫಾರಂಗಳಿಗೆ ರೈಲುಗಳು ಸೇರುವ ಸಮಯದ ಬಗ್ಗೆ ರೈಲುಗಳಲ್ಲಿ ಘೋಷಣೆ ಮೂಲಕ ತಿಳಿಸುವ ಮತ್ತು ಡಿಸ್ಪ್ಲೇ ಬೋರ್ಡ್ಗಳ ವ್ಯವಸ್ಥೆ.
ಕೆಲವು ರೈಲುಗಳಲ್ಲಿ ಯುವಕರು ಸೇರಿದಂತೆ ಆಸಕ್ತರಿಗೆ ಉಚಿತವಾಗಿ ವೈಫೈ ಸೌಲಭ್ಯ.
ಈಗಾಗಲೇ ಇರುವ 980 ಆದರ್ಶ ನಿಲ್ದಾಣಗಳ ಮಾದರಿಯಲ್ಲಿ ಇನ್ನೂ 60 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದು.
ರೇಲ್ವೆ ನಿಲ್ದಾಣಗಳಲ್ಲಿ ಸರ್ಕಾರೇತರ ಸಂಘಟನೆಗಳ ನೆರವಿನೊಂದಿಗೆ ಪ್ರಥಮ ಚಿಕಿತ್ಸೆ ಸೇವೆ ಒದಗಿಸುವುದು.