ಒಂದೇ ದಿನದಲ್ಲಿ 5.02 ಲಕ್ಷ ಇ-ಟಿಕೆಟ್ ವಿತರಣೆ
ನವದೆಹಲಿ: ಒಂದೇ ದಿನದಲ್ಲಿ ಬರೋಬ್ಬರಿ 5.02 ಲಕ್ಷ ಇ-ಟಿಕೆಟ್ ವಿತರಿಸುವ ಮೂಲಕ ಇಂಡಿಯನ್ ರೇಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್(ಐಆರ್ಸಿಟಿಸಿ) ದಾಖಲೆ ನಿರ್ಮಿಸಿದೆ. ಈ ಹಿಂದೆ ಕಳೆದ ವರ್ಷದ ಜುಲೈ 7ರಂದು ಐಆರ್ಸಿಟಿಸಿ 4.96 ಲಕ್ಷ ಇ-ಟಿಕೆಟ್ ಬುಕ್ ಮಾಡಿತ್ತು. ತತ್ಕಾಲ್ ಬುಕಿಂಗ್ ಹಾಗೂ ಹಬ್ಬಹರಿದಿನಗಳ ಸಂದರ್ಭದಲ್ಲಿ ಟಿಕೆಟ್ ವಿತರಣೆ ವೇಳೆಗಿನ ಭಾರಿ ಬೇಡಿಕೆ ನಿಭಾಯಿಸುವಲ್ಲಿ ಐಆರ್ಸಿಟಿಸಿ ವೆಬ್ಸೈಟ್ ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ನಡುವೆಯೇ ಸಂಸ್ಥೆ ಇಂತಹ ಸಾಧನೆ ಮಾಡಿದೆ. ಸದ್ಯ ಸಂಸ್ಥೆಯ ವೆಬ್ಸೈಟ್ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಸುಮಾರು 4 ಕೋಟಿ ವೆಚ್ಚದಲ್ಲಿ ಹೆಚ್ಚು ಸಾಮರ್ಥ್ಯದ ಹೆಕ್ಸಾ ಕೋರ್ ಸರ್ವರ್(64 ಜಿಬಿ ರ್ಯಾಮ್) ಅನ್ನು ಕಲ್ಪಿಸಲಾಗಿದೆ. ಈ ಮೂಲಕ ತತ್ಕಾಲ್ ಅವಧಿಯಲ್ಲಿ ಬುಕಿಂಗ್ ಪ್ರಮಾಣವನ್ನು ಶೇ.40-45ರಷ್ಟು ಏರಿಸುವ ಪಣ ತೊಡಲಾಗಿದೆ ಎಂದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.