ಒಂದೇ ಸೆಕೆಂಡಲ್ಲಿ ಮೊಬೈಲ್ ಚಾರ್ಜ್
ಮೊಬೈಲ್ ಹಾಗೂ ಕಾರನ್ನು ಕೇವಲ ಒಂದೇ ಒಂದು ಸೆಕೆಂಡಿನಲ್ಲಿ ಚಾರ್ಚ್ ಮಾಡಬಲ್ಲ ಬ್ಯಾಟರಿಯೊಂದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಈ ಮೈಕ್ರೋ ಸ್ಕೇಲ್ಡ್ ಗ್ರಾಫೆನ್ ಆಧಾರಿತ ಸೂಪರ್ಕೆಪಾಸಿಟರ್ಗಳು ಮಾಮೂಲಿ ಬ್ಯಾಟರಿಗಳಿಗಿಂತ ಸಾವಿರಪಟ್ಟು ವೇಗದಲ್ಲಿ ಚಾರ್ಚ್ ಆಗಬಲ್ಲವು. ಕಾರ್ಬನ್ನ ಒಂದು ಪರಮಾಣುವಿನಷ್ಟು ತೆಳು ಪದರದಿಂದ ನಿರ್ಮಿಸಿದ ಈ ಬ್ಯಾಟರಿಯನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಗ್ಯಾಜೆಟ್ಗಳಿಗೆ ಸುಲಭವಾಗಿ ಅಳವಡಿಸಬಹುದು. ಈ ಮೈಕ್ರೋ ಸೂಪರ್ಕೆಪಾಸಿಟರ್ ಅನ್ನು ಅಭಿವೃದ್ಧಿಪಡಿಸಲು ಸಂಶೋಧಕರು ಕಾರ್ಬನ್ನ ದ್ವಿಮುಖ ಹಾಳೆ(ಗ್ರಾಫೆನೆ) ಅನ್ನು ಬಳಸಿದ್ದಾರೆ. ಅಲ್ಲದೆ, ಈ ಬ್ಯಾಟರಿಯ ಉತ್ಪಾದನೆಯೂ ಸುಲಭ. ಗುಣಮಟ್ಟದ ಡಿವಿಡಿ ಬರ್ನರ್ ಬಳಸಿಕೊಂಡು ಈ ಬ್ಯಾಟರಿಯನ್ನು ಸುಲಭವಾಗಿ ಉತ್ಪಾದಿಸಬಹುದು. ಈ ಮೂಲಕ ಒಂದು ಡಿಸ್ಕ್ ಬಳಸಿಕೊಂಡು 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 100 ಮೈಕ್ರೋ ಸೂಪರ್ ಕೆಪಾಸಿಟರ್ಗಳನ್ನು ಉತ್ಪಾದಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.