ಫೇಸ್‌ಬುಕ್ 'ನ್ಯೂಸ್‌ಫೀಡ್'ಗೆ ಶೀಘ್ರದಲ್ಲೇ ಹೊಸ ಲುಕ್
ಸಾಮಾಜಿಕ ತಾಣ ಫೇಸ್‌ಬುಕ್ ತನ್ನ...
ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ತಾಣ ಫೇಸ್‌ಬುಕ್ ತನ್ನ ಒಂದು ಶತಕೋಟಿ ಖಾತೆದಾರರಿಗೆ ಸರ್‌ಪ್ರೈಸ್ ನೀಡಲು ಸಿದ್ಧವಾಗಿದೆ. ಇದೇ 7ರಂದು ಫೇಸ್‌ಬುಕ್‌ನ 'ನ್ಯೂಸ್‌ಫೀಡ್'ನ ಸ್ವರೂಪದಲ್ಲಿ ಬದಲಾವಣೆ ಆಗಲಿದೆ.
ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್‌ನಲ್ಲಿ ನ್ಯೂಸ್‌ಫೀಡ್ ಬದಲಾವಣೆಯನ್ನು ಕಂಪನಿ ಪ್ರದರ್ಶಿಸಲಿದೆ. ಇದು ಪ್ರಸಕ್ತ ವರ್ಷ ಫೇಸ್‌ಬುಕ್ ನಡೆಸುತ್ತಿರುವ ಎರಡನೇ ಹೈಪ್ರೊಫೈಲ್ ಕಾರ್ಯಕ್ರಮವಾಗಿದೆ. ಜನವರಿಯಲ್ಲಷ್ಟೇ ಕಂಪನಿ ತನ್ನ ಸೋಷಿಯಲ್ ಸರ್ಚ್ ಫೀಚರ್ ಆರಂಭಿಸಿತ್ತು.
ಇತ್ತೀಚೆಗೆ ಪಿಸಿ ಮೂಲಕ ಫೇಸ್‌ಬುಕ್ ಬಳಸುವವರಿಗಿಂತ ಮೊಬೈಲ್ ಬಳಕೆದಾರರೇ ಹೆಚ್ಚಾಗಿದ್ದಾರೆ. ಆದರೆ, ಪಿಸಿಯಲ್ಲಿ ದೊರೆಯುವಂತಹ ಫೀಚರ್‌ಗಳೆಲ್ಲ ಮೊಬೈಲ್‌ನಲ್ಲಿ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ತನ್ನ ನ್ಯೂಸ್‌ಫೀಡ್ ಸ್ವರೂಪದಲ್ಲಿ ಬದಲಾವಣೆ ತರಲು ಫೇಸ್‌ಬುಕ್ ನಿರ್ಧರಿಸಿದೆ.
ಡೆಸ್ಕ್‌ಟಾಪ್, ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಬಳಕೆದಾರರು ನ್ಯೂಸ್‌ಫೀಡ್‌ನಲ್ಲಿನ ಫೋಟೋ, ವಿಡಿಯೋಗಳನ್ನು ದೊಡ್ಡ ಗಾತ್ರದಲ್ಲಿ ವೀಕ್ಷಿಸುವಂತೆ ಬದಲಾವಣೆ ಮಾಡಲಾಗುತ್ತದೆ. ಇದು ಹೊಸ ಜಾಹೀರಾತುಗಳ ಮಾರಾಟಕ್ಕೂ ನೆರವಾಗಲಿದೆ ಎನ್ನುವುದು ಮೂಲಗಳ ಹೇಳಿಕೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.