ಮತದಾರರಿಗೆ ಇನ್ನು ಹೊಸ ಗುರುತಿನ ಚೀಟಿ
ಲಖನೌ: ಮತದಾರರ ಗುರುತಿನ ಚೀಟಿ ಕಳಪೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪಾನ್ಕಾರ್ಡ್ ಮಾದರಿಯಲ್ಲೇ ನೂತನ ಗುರುತಿನ ಚೀಟಿ ವಿತರಿಸಲು ನಿರ್ಧರಿಸಿದೆ.
ಈ ಗುರುತಿನ ಚೀಟಿಯು ಮತದಾರರ ಬಣ್ಣದ ಭಾವಚಿತ್ರವನ್ನು ಹೊಂದಿರಲಿದೆ. ಈಗಾಗಲೇ ಗುರುತಿನ ಚೀಟಿ ಹೊಂದಿರುವವರು ಈ ನೂತನ ಗುರುತಿನ ಚೀಟಿ ಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಅವರು ಎಷ್ಟು ಶುಲ್ಕ ವಿಧಿಸಬೇಕು ಎನ್ನುವುದು ಇನ್ನಷ್ಟೇ ನಿಗದಿಯಾಗಬೇಕಿದೆ.
ಕಾರ್ಡ್ಗಳಲ್ಲಿ ಏನೇನಿರಬೇಕು ಎನ್ನುವ ಮಾಹಿತಿಯನ್ನು ಚುನಾವಣಾ ಆಯೋಗ ಈಗಾಗಲೇ ಎಲ್ಲಾ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ರವಾನಿಸಿದೆ. ಅಸ್ಸಾಂನಲ್ಲಿ ನೂತನ ಕಾರ್ಡ್ಗಳನ್ನು ಈಗಾಗಲೇ ವಿತರಿಸಲಾಗಿದೆ.
ಕಾರ್ಡ್ನಲ್ಲೇನಿದೆ?
ಈ ನೂತನ ಕಾರ್ಡ್ 8.6 ಸೆ.ಮೀ. ಉದ್ದ ಮತ್ತು 5.6 ಸೆ.ಮೀ.ಅಗಲ ಇರಲಿದೆ. ಪಿವಿಸಿ ಶೀಟ್ ಮೇಲೆ ಮಾಹಿತಿಯನ್ನು ಮುದ್ರಿಸಲಾಗಿರುತ್ತದೆ. ನಂತರ ಲ್ಯಾಮಿನೇಟ್ ಮಾಡಲಾಗಿರುತ್ತದೆ.
ಬಣ್ಣದ ಫೋಟೊಗಳು ಚರ್ಮದ ನೈಜ ಬಣ್ಣವನ್ನು ತೋರಿಸುವಂತಿರಬೇಕು. ನೆರಳು, ಶಾಹಿಯ ಕಲೆಗಳು ಇರಬಾರದು.
ಈ ಕಾರ್ಡ್ಗಳನ್ನು ಮತದಾರರ ಮನೆಗೆ ಪೋಸ್ಟಲ್ ಮೂಲಕ ತಲುಪಿಸಲಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.