ಪೆಟ್ರೋನೆಟ್ ಡೀಲ್ನಿಂದ ನಷ್ಟ
ನವದೆಹಲಿ: ಪೆಟ್ರೋನೆಟ್ಗೆ ಲಿಕ್ವಿಡ್ ಗ್ಯಾಸ್ ಪೂರೈಸುವ ಕತಾರ್ನ ಕಂಪನಿಯೊಂದು ಗುತ್ತಿಗೆಯಲ್ಲಿ ಮಾಡಿದ ಅಕ್ರಮದಿಂದಾಗಿ ಬೊಕ್ಕಸಕ್ಕೆ 27 ಸಾವಿರ ಕೋಟಿ ನಷ್ಟವಾಗಿದ್ದು, ಇದನ್ನು ತಕ್ಷಣವೇ ತನಿಖೆ ನಡೆಸಬೇಕು ಎಂದು ಸರ್ಕಾರದ ಮಾಜಿ ಕಾರ್ಯದರ್ಶಿ ಇ.ಎ.ಎಸ್. ಶರ್ಮಾ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಕತಾರ್ನ ಕಂಪನಿಯಾದ ರ್ಯಾಸ್ಗ್ಯಾಸ್ ಒಪ್ಪಂದವನ್ನು ಉಲ್ಲಂಘಿಸಿದ್ದು, ಅದರಲ್ಲಿ ತೈಲ ಸಚಿವಾಲಯ ಹಾಗೂ ಪೆಟ್ರೋನೆಟ್ ಎಲ್ಎನ್ಜಿ ಲಿಮಿಟೆಡ್ ಅಧಿಕಾರಿಗಳ ಪಾತ್ರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಶರ್ಮಾ ಒತ್ತಾಯಿಸಿದ್ದಾರೆ. ಒಪ್ಪಂದದಂತೆ ಕತಾರ್ನ ಕಂಪನಿಯು 7.5 ದಶಲಕ್ಷ ಟನ್ ಗುಣಮಟ್ಟದ ಅನಿಲವನ್ನು ಪೂರೈಸಬೇಕಿತ್ತು. ಆದರೆ, ಕಂಪನಿ ಕೇವಲ 5 ದಶಲಕ್ಷ ಟನ್ ಗುಣಮಟ್ಟದ ಅನಿಲ ಪೂರೈಸಿ, ಉಳಿದ 2.5 ದಶಲಕ್ಷ ಟನ್ನಷ್ಟು ಸಾರರಹಿತ ಅನಿಲ ಪೂರೈಸಿದೆ. ಸ್ವತಃ ತೈಲ ಕಾರ್ಯದರ್ಶಿಗಳೇ ಪೆಟ್ರೋನೆಟ್ನ ಮುಖ್ಯಸ್ಥರಾಗಿದ್ದರೂ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದೂ ಶರ್ಮಾ ಆರೋಪಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.