ಬೆಸ್ತರ ಕುಟುಂಬಕ್ಕೆ ಸಲ್ಲು ಬೆದರಿಕೆ
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್ಗಳ ವಿರುದ್ಧ ಎಫ್ಐಆರ್...
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್ಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ಹೊರವಲಯ ಬಾಂದ್ರಾದ ಬೆಸ್ತರ ಕುಟುಂಬವೊಂದು ಆಗ್ರಹಿಸಿದೆ.
ಸಮುದ್ರದ ಬದಿಯಲ್ಲಿಡುವ ದೋಣಿ ಹಾಗೂ ಬಲೆಗಳನ್ನು ಸ್ಥಳಾಂತರಿಸುವಂತೆ ಸಲ್ಮಾನ್ ಹಾಗೂ ಅವರ ಬಾಡಿಗಾರ್ಡ್ಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈ ಕುಟುಂಬವು ತಮ್ಮ ದೋಣಿಗಳು ಹಾಗೂ ಬಲೆಗಳನ್ನು ಸಮುದ್ರದ ಬದಿಯಲ್ಲಿ ಇಡುತ್ತವೆ. ಸಲ್ಮಾನ್ ಅವರ ಬಂಗಲೆಯಿಂದ ಸಮುದ್ರದ ದೃಶ್ಯ ವೀಕ್ಷಿಸಲು ಈ ದೋಣಿ, ಬಲೆಗಳು ಅಡ್ಡವಾಗುತ್ತಿದೆ ಎಂಬ ಕಾರಣಕ್ಕಾಗಿ ಅವರ ಬಾಡಿಗಾರ್ಡ್ಗಳು ಬೆಸ್ತನ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ, ಬಾಂದ್ರಾ ಪೊಲೀಸರು ಮಾತ್ರ ಶಿಕ್ಷಾರ್ಹವಲ್ಲದ ಅಪರಾಧ ಎಂದು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯ ಲಾರೆನ್ಸ್ ಆರೋಪಿಸಿದ್ದಾರೆ. ಈಗ ಲಾರೆನ್ಸ್ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ಸಲ್ಲು, ಅವರ ತಂದೆ, ಬಾಡಿಗಾರ್ಡ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.