ಮ್ಯಾಗಝಿನ್ ಮೂಲಕ ಉಗ್ರರಿಗೆ ತರಬೇತಿ
ಲಂಡನ್: ಉಗ್ರಗಾಮಿಗಳನ್ನು ತಯಾರಿಸುವ ಪಾಠಶಾಲೆ, ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಅಲ್ಖೈದಾ ವೆಬ್ಸೈಟ್ ಅಷ್ಟೇ ಅಲ್ಲ ತನ್ನದೇ ಆದ ಮ್ಯಾಗಝಿನ್ ಅನ್ನೂ ಹೊರತರುತ್ತಿದೆ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ!
ಇಂಗ್ಲಿಷ್ನಲ್ಲಿ ಪ್ರಕಟವಾಗುವ 'ಇನ್ಸ್ರೈರ್' ಹೆಸರಿನ ಈ ಮ್ಯಾಗಝಿನ್ ಮೂಲಕ ಉಗ್ರಗಾಮಿಗಳಿಗೆ ಸಮಾಜಘಾತುಕ ಕೃತ್ಯಗಳನ್ನು ನಡೆಸುವುದು ಹೇಗೆನ್ನುವ ಕುರಿತೂ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ಫಿಲ್ಮ್ ಮ್ಯಾಗಝಿನ್ಗಿಂತ ಕಡಿಮೆ ಇಲ್ಲ ಎಂಬಂತಿರುವ ಈ ಮ್ಯಾಗಝಿನ್ನ 10ನೇ ಆವೃತ್ತಿ ಇದೀಗ ಬಿಡುಗಡೆಯಾಗಿದೆ. ಈಗಾಗಲೇ ಇದು ಅನೇಕ ಉಗ್ರರ ಕೈಸೇರಿಯೂ ಆಗಿದೆ. ಯೆಮನ್ನಲ್ಲಿ ಮುದ್ರಣವಾಗುತ್ತಿದೆ ಎನ್ನಲಾದ ಈ ಮ್ಯಾಗಝಿನ್ನಲ್ಲಿ ಕಾರಿಗೆ ಬೆಂಕಿ ಇಡುವುದು, ವಾಹನ ಅಪಘಾತಗಳನ್ನು ನಡೆಸುವುದು ಹೇಗೆ... ಸೇರಿದಂತೆ ಸಮಾಜಘಾತುಕ ಕೃತ್ಯಗಳನ್ನು ನಡೆಸುವುದು ಹೇಗೆನ್ನುವ ಕುರಿತು ಅನೇಕ ಸಲಹೆ ಸೂಚನೆಗಳಿವೆ. ಈ ಮೂಲಕ ವಿಶ್ವಾದ್ಯಂತ ದೃಷ್ಕೃತ್ಯಗಳಿಗೆ ಅಲ್ಖೈದಾ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
4 ಬಾರಿ...: ಈ ಮ್ಯಾಗಝಿನ್ ವರ್ಷಕ್ಕೆ 4 ಬಾರಿ ಪ್ರಕಟವಾಗುತ್ತದೆ. ಇದರ ಪ್ರಮುಖ ಬರಹಗಾರ 26 ವರ್ಷದ ಸಮೀರ್ ಖಾನ್ 2011ರಲ್ಲಿ ಯೆಮೆನ್ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದ. ಇಷ್ಟಾದರೂ ಈ ಮ್ಯಾಗಝಿನ್ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಹೊರಬರುತ್ತಿದೆ. ಬಂಧಿತರಾದ ಅನೇಕರು ಈ ಮ್ಯಾಗಝಿನ್ ಹೊಂದಿರುವುದು ಬೆಳಕಿಗೆ ಬಂದಿತ್ತು. ಉಗ್ರ ಕೃತ್ಯಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎನ್ನುವುದು ಈಗಾಗಲೇ ಬಹಿರಂಗವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.