ಅಂಬಿಕಾಪುರ: ಛತ್ತೀಸ್‌ಗಡ ವಿಧಾನಸಭೆ ಚುನಾವಣೆಯ 2ನೇ ಮತ್ತು ಕೊನೇ ಹಂತದ ಮತದಾನ ಮಂಗಳವಾರ ನಡೆಯಲಿದೆ. ನಕ್ಸಲ್ ಪೀಡಿತ ಅಂಬಿಕಾಪುರ ಸೇರಿದಂತೆ 72 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ.
843 ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದು, 1,39,75,472 ಮಂದಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ 3 ತಿಂಗಳ ಹಿಂದೆಯೇ ವ್ಯವಸ್ಥಿತ ರೀತಿಯಲ್ಲಿ ಮತದಾರರಿಗೆ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೀಗಾಗಿ ಹೆಚ್ಚಿನ ಜನರು ಹಕ್ಕುಚಲಾಯಿಸಲು ಆಸಕ್ತಿ ತೋರಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಮತದಾನ ಪ್ರಮಾಣ ಹೆಚ್ಚಾಗಲಿದೆ ಎಂದು ಛತ್ತೀಸ್‌ಗಡದ ಮುಖ್ಯ ಚುನಾವಣಾ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ.11ರಂದು ಛತ್ತೀಸ್‌ಗಡದ 18 ಕ್ಷೇತ್ರಗಳಿಗೆ ಮೊದಲನೇ ಹಂತದ ಮತದಾನ ನಡೆದಿತ್ತು.