ಮುಂಬೈ: ಬಾಲಿವುಡ್ ಖ್ಯಾತ ಹಾಸ್ಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದೇವನ್ ವರ್ಮಾ(77) ಅವರು ಹೃದಯಾಘಾತದಿಂದ ಮಂಗಳವಾರ ವಿಧಿವಶರಾಗಿದ್ದಾರೆ.
ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ಭಾಜನರಾಗಿದ್ದ ವರ್ಮಾ ಅವರು ಇಂದು ಬೆಳಗ್ಗೆ ಪುಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಪತ್ನಿ ರೂಪಾ ಗಂಗೂಲಿ ಹಾಗೂ ಓರ್ವ ಪುತ್ರಿಯನ್ನು ಆಗಲಿದ್ದಾರೆ. ಇಂದು ಸಂಜೆ ಯರವಾಡದಲ್ಲಿ ವರ್ಮಾ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂಗೂರ್, ಚೋರಿ ಮೆರಾ ಕಾಮ್, ಅಂದಾಜ್ ಅಪ್ನಾ ಅಪ್ನಾ, ಬೆಮಿಸಾಲ್, ಜೂದಾಯಿ, ದಿಲ್ ತೊ ಪಾಗಲ್ ಹೈ ಮತ್ತು ಕೊರಾ ಕಾಗಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ವರ್ಮಾ ನಟಿಸಿದ್ದಾರೆ.