ಪ್ರಧಾನಿ ನರೇಂದ್ರ ಮೋದಿ 
ದೇಶ

ಶಬರಿಮಲೆಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ

ರಾಷ್ಟ್ರೀಯ ಪುಣ್ಯಕ್ಷೇತ್ರವಾಗಿ ಘೋಷಿಸಿದರೆ, ಜಾಗತಿಕ ಮಟ್ಟದಲ್ಲಿ ಶಬರಿಗಿರಿ ಸುಪ್ರಸಿದ್ಧ ಕ್ಷೇತ್ರವಾಗಿ...

ತಿರುವನಂತಪುರ: ಮುಂದಿನ ವರ್ಷ ಜನವರಿಯಂದು ಪ್ರಧಾನಿ ನರೇಂದ್ರ ಮೋದಿ ಶಬರಿಮಲೆಗೆ ಬರುವ ಸಾಧ್ಯತೆಗಳಿವೆ ಎಂದು ತಿರುವಾದಂಕೂರ್ ದೇವಸಂ ಬೋರ್ಡ್ ತಿಳಿಸಿದೆ.

ಕೇರಳದಲ್ಲಿರುವ ಸುಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷವೂ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದ ಹಲವು ಭಕ್ತರು ಆಗಮಿಸಿ ಶಬರಿಶಾಸ್ತನ ದರ್ಶನ ಪಡೆಯುವರು. ಭಕ್ತಾದಿಗಳ ಅನುಕೂಲಕ್ಕಾಗಿ ತಿರುವಾದಂಕೂರ್ ದೇವಸಂ ಬೋರ್ಡ್ ಹಲವು ಬಗೆಯ ಅಭವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ.

ಏಥೇನ್ ಮಧ್ಯೆ ಶಬರಿಮಲೆಯನ್ನು ರಾಷ್ಟ್ರೀಯ ತೀರ್ಥ ಕ್ಷೇತ್ರವನ್ನಾಗಿ ಘೋಷಿಸಲು ಸಾರ್ಕರ ಚಿಂತನೆ ನಡೆಸುತ್ತಿದೆ. ಈ ಕುರಿತು ಇತ್ತಿಚೆಗೆ ಕೇರಳ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಸಹಾ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಆ ಭೇಟಿಯ ಸಮಯದಲ್ಲಿ ಶಬರಿ ಮಲೆಗೆ ಆಗಮಿಸಲು ಆಹ್ವಾನ ಕೋರಲಾಗಿತ್ತು. ಪ್ರಧಾನಿ ಮೋದಿ ಸಹಾ ಆಹ್ವಾನವನ್ನು ಸ್ವೀಕರಿಸಿದ್ದರು ಎಂಬ ಮಾಹಿತಿ ತಿಳಿದುಬಂದಿತ್ತು.

ಈ ಸಂಬಂಧ ತಿರುವಾದಂಕೂರ್ ದೇವಸಂ ಮಂಡಳಿಯ ಅಧ್ಯಕ್ಷ ಗೋವಿಂದನ್ ನಾಯರ್, ಜನವರಿ ತಿಂಗಳಿನಿಲ್ಲಿ ಶಬರಿ ಮಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.  

ಜನವರಿ ತಿಂಗಳು ಕೇರಳದಲ್ಲಿ ರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಕೇರಳಕ್ಕೆ ಆಗಮಿಸುವುದು ಖಚಿತವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶಬರಿಗಿರಿ ಶಾಸ್ತನ ದರ್ಶನ ಮಾಡುವ ಸಾಧ್ಯತೆಗಳಿವೆ ಎಂದು ಅವರು ವಿವರಿಸಿದರು.

ಶಬರಿಗಿರಿಯನ್ನು ರಾಷ್ಟ್ರೀಯ ಪುಣ್ಯಕ್ಷೇತ್ರವಾಗಿ ಘೋಷಿಸಿದರೆ, ಜಾಗತಿಕ ಮಟ್ಟದಲ್ಲಿ ಶಬರಿಗಿರಿ ಸುಪ್ರಸಿದ್ಧ ಕ್ಷೇತ್ರವಾಗಿ ಹೊರಹೊಮ್ಮಲಿದೆ. ಶಬರಿಮಲೆ ಅಭಿವೃದ್ಧಿ ಕಾಮಗಾರಿಗೆ ಇನ್ನೂ 500 ಎಕರೆ ಜಾಗ ಅಗತ್ಯವಿದೆ. ಬೇಕಾಗುವಷ್ಟು ಜಾಗವನ್ನು ಕೇಂದ್ರ ಸರ್ಕಾರ ಶಬರಿಮಲೆಗೆ ಒದಗಿಸಿದ್ದಲ್ಲಿ, ಅದಕ್ಕೆ ಬದಲಾಗಿ ದೇವಸಂ ಮಂಡಳಿ ಬಳಿ ಇರುವ ಜಾಗವನ್ನು ಅರಣ್ಯಇಲಾಖೆಗೆ ಒಪ್ಪಿಸಲು ಸಿದ್ಧವಾಗಿರುವುದಾಗಿ ಅವರು ತಿಳಿಸಿದರು.

ಅಲ್ಲದೇ ಶಬರಿ ಮಲೆಯಲ್ಲಿ 'ರೋಪ್ ವೇ' ಸ್ಥಾಪಿಸುವ ಚಿಂತನೆ ಕೈಗೊಂಡಿದ್ದು, ಒಂದು ವರ್ಷದಲ್ಲಿ ಈ ಕಾಮಗಾರಿ ಆರಂಭಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ಗೋವಿಂದನ್ ನಾಯರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT