ಇಸಿಸ್ ಮುಖ್ಯಸ್ಥ ಅಬುಬಕ್ಕರ್ ಅಲ್-ಬಾಗ್ದಾದಿ 
ದೇಶ

ಲೆಬನಾನ್ ಸೇನೆಯಿಂದ ಇಸಿಸ್ ಮುಖ್ಯಸ್ಥನ ಪತ್ನಿ, ಪುತ್ರಿ ಬಂಧನ

ಲಂಡನ್: ಇರಾಕ್ ಮತ್ತು ಸಿರಿಯಾದಲ್ಲಿ ರಕ್ತಪಾತ ನಡೆಸುತ್ತಿರುವ ಇಸಿಸ್‌ಗೆ ಮಹತ್ವದ ಹಿನ್ನೆಡೆಯಾಗಿದೆ. ಇಸಿಸ್ ಮುಖಂಡ ಅಬುಬಕ್ಕರ್ ಅಲ್-ಬಾಗ್ದಾದಿ ಪತ್ನಿ ಹಾಗೂ ಪುತ್ರಿಯನ್ನು ಲೆಬನಾನ್ ಸೇನೆ ಬಂಧಿಸಿದೆ.

ಸಿರಿಯಾ ಗಡಿ ದಾಟಿ ಲೆಬನಾನ್‌ಗೆ ಪ್ರವೇಶಿಸುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರ ರಾಷ್ಟ್ರೀಯತೆ ಅಥವಾ ಹೆಸರನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ, ಬಂಧಿತರಲ್ಲಿ ಒಬ್ಬರು ಬಾಗ್ದಾದಿ ಪತ್ನಿ ಎಂದು ಹೇಳಿದೆ.

ವಿದೇಶಿ ಗುಪ್ತಚರ ಇಲಾಖೆಯಗಳ ನೆರವಿನಿಂದ ಬಾಗ್ದಾದಿ ಪತ್ನಿ ಮತ್ತು ಪುತ್ರಿಯನ್ನು ಬಂಧಿಸಲಾಗಿದೆ ಎಂದು ಲೆಬನಾನಿ ಪತ್ರಿಕೆಯೊಂದು ವರದಿ ಮಾಡಿದೆ. ಇವರನ್ನು ಉತ್ತರ ಲೆಬನಾನ್‌ನಲ್ಲಿ ಬಂಧಿಸಲಾಗಿದೆ. ಇಸಿಸ್ ಉಗ್ರರು ನೂರಾರು ಉಗ್ರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇವರಲ್ಲಿ ಲೆಬನಾನ್‌ನ ಪ್ರಜೆಗಳೂ ಇದ್ದಾರೆ. ಬಾಗ್ದಾದಿ ಪತ್ನಿ, ಪುತ್ರಿಯ ಬಂಧನದಿಂದ ಆಕೆಯನ್ನು ಮುಂದಿಟ್ಟುಕೊಂಡು ಲೆಬನಾನ್ ಸರ್ಕಾರ ಇಸಿಸ್ ವಶದಲ್ಲಿರುವ ವಿದೇಶಿಯರ ಬಿಡುಗಡೆಗೆ ಒತ್ತಡ ಹೇರಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel