ನವದೆಹಲಿ: ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಮಾಹಿತಿಗಳನ್ನು ಭಾರತೀಯ ಕಾನೂನಿಗೆ ಅನುಸಾರವಾಗಿ ಇನ್ನೂ ಯಾಕೆ ನಿಷೇಧ ಮಾಡಿಲ್ಲ ಎಂದು ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಕಾರ್ಪೋರೇಷನ್ ವೆಬ್ ಸೈಟ್‌ಗಳಿಗೆ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಶೀಘ್ರ ನಿಲುವನ್ನು ಸ್ಪಷ್ಟಪಡಿಸಿ ಎಂದು ಚಾಟಿ ಬೀಸಿದೆ.
'ಈ ಭ್ರೂಣಲಿಂಗ ಪತ್ತೆ ಮಾಡುವ ಮಾಹಿತಿ ಇರುವ ವೆಬ್‌ಸೈಟ್‌ಗಳ ಸರ್ವರ್ ಹೊರ ದೇಶಗಳಲ್ಲಿದೆ. ನಾವು ಭಾರತದಲ್ಲಿ ಇವುಗಳಿಗೆ ನಿಷೇಧ ಹೇರಲು ಸಾಧ್ಯವಿಲ್ಲ' ಎಂದು ಸೈಬರ್ ಕಾನೂನುಗಳ ರಚನೆ ಮತ್ತು ಮಾಹಿತಿ ತಂತ್ರತ್ರಾನ ಇಲಾಖೆಯ ಸಮೂಹ ಸಮನ್ವಯಕಾರ ಅಫಿಡವಿಟ್ ಸಲ್ಲಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಇದನ್ನು ಒಪ್ಪತಕ್ಕದ್ದಲ್ಲ. ಬೇರೆ ದೇಶಗಳ ಕಾನೂನುಗಳನ್ನು ಇಲ್ಲಿ ಹೇಳುವುದು ಸರಿಯಲ್ಲ ಎಂದಿದೆ.