'ಕಿಸ್ ಆಫ್ ಲವ್' 
ದೇಶ

'ಕಿಸ್ ಆಫ್ ಲವ್' ಆಯ್ತು ಇದೀಗ 'ಕಿಸ್ ಇನ್ ದಿ ಸ್ಟ್ರೀಟ್'

ಯುವಕ ಯುವತಿಯರು ಪರಸ್ಪರ ಚುಂಬನ ನೀಡುವ ನೀಡುವ ಮೂಲಕ ಪ್ರತಿಭಟನೆ...

ತಿರುವನಂತಪುರ: ಕೇರಳದಲ್ಲಿ ನಾಳೆ 2ನೇ ಹಂತದ 'ಕಿಸ್ ಆಫ್ ಲವ್' ಪ್ರತಿಭಟನೆ ನಡೆಯಲಿದ್ದು ಕೋಝಿಕೋಡ್ನಲ್ಲಿ ಭರದ ಸಿದ್ಧತೆ ಸಾಗಿದೆ.

ಕೋಝಿಕೋಡ್ನ ಪ್ರದೇಶದಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಬೆಳಕಿಗೆ ಬಂದಿತು. ಇದರ ಬೆನ್ನಲ್ಲೆ ಸ್ಥಳೀಯ ಜನಪರ ಸಂಘಟನೆಗಳು ಇದರ ವಿರುದ್ಧ ಪ್ರತಿಭನಟನೆ ನಡೆಸಲು ಮುಂದಾದವು.

ಅಂತೆಯೇ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದನ್ನು ಖಂಡಿಸಿ, ಕೆಲ ಫೇಸ್ ಬುಕ್ ನವೆಂಬರ್ 2 ರಂದು, ಸಂಘಟನೆಗಳು ಕೊಚ್ಚಿ ತೀರದಲ್ಲಿ 'ಕಿಸ್ ಆಫ್ ಲವ್' ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಯುವಕ ಯುವತಿಯರು ಸೇರಿದಂತೆ ಹಲವರು ಪರಸ್ಪರ ಚುಂಬನ ನೀಡುವ ನೀಡುವ ಮೂಲಕ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪ್ರತಿಭನಟೆಯಲ್ಲಿ ಭಾಗವಹಿಸಿದ್ದವರನ್ನು ಪೊಲೀಸರು ಬಂದಿಸಲು ಮುಂದಾದರು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು.

ಇದರ ಬೆನ್ನಲ್ಲೆ ದೇಶದ ಪ್ರಮುಖ ನಗರಗಳಲ್ಲೂ 'ಕಿಸ್ ಆಫ್ ಲವ್' ಹೆಸರಿನಡಿಯಲ್ಲಿ ಪ್ರತಿಭಟನೆ ನಡೆಸುವ ಕುರಿತು ವಿವಾದಕ್ಕೂ ಕಾರಣವಾಯಿತು. ಬೆಂಗಳೂರಿನಲ್ಲಿ ಕಳೆದ ನವೆಂಬರ್ 22 ರಂದು 'ಕಿಸ್ ಆಫ್ ಲವ್' ಪ್ರತಿಭಟನೆ ನಡೆಸುವ ಕುರಿತು ಕೆಲ ಸಂಘಟನೆಗಳು ಸರ್ಕಾರದ ಅನುಮತಿ ಪಡೆಯಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ಸಾಮಾಜಿಕ ಮನೋಭಾವಕ್ಕೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಲಿಲ್ಲ. ಸರ್ಕಾರದ ನಿರ್ಧಾರದಿಂದಾಗಿ 'ಕಿಸ್ ಆಫ್ ಲವ್' ಕಾರ್ಯಕ್ರಮದ ಆಯೋಜಕರು ಹಿಂದೆಸರಿದರು.

ಇದೀಗ ಕೇರಳದಲ್ಲಿ ಮತ್ತೆ 'ಕಿಸ್ ಆಫ್ ಲವ್' ಕಾರ್ಯಕ್ರಮ ನಡೆಯುವ ಕುರಿತು ಆಯೋಜಕರು ಪ್ರಕಟಿಸಿದ್ದಾರೆ.

2ನೇ ಹಂತದ 'ಕಿಸ್ ಆಫ್ ಲವ್' ಪ್ರತಿಭಟನೆಯನ್ನು 'ಕಿಸ್ ಇನ್ ದಿ ಸ್ಟ್ರೀಟ್' ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದೆ. ನಾಳೆ ಕೋಝಿಕೋಡ್ ನ ಮೋಫಿಸಿಸ್ ಬಸ್ ನಿಲ್ದಾಣದ ಸಮೀಪ ಪ್ರತಿಭಟನೆ ನಡೆಯಲಿದೆ.

 'ಕಿಸ್ ಇನ್ ದಿ ಸ್ಟ್ರೀಟ್' ಪ್ರತಿಭಟನೆಯಲ್ಲಿ ಭಾಗವಹಿಸಲು ಈಗಾಗಲೇ ಸಾವಿರಾರು ಮಂದಿ ಯುವಕರು, ಯುವತಿಯರು ತಮ್ಮ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT