ಚೈಬಾಸಾ(ಜಾರ್ಖಂಡ್): ವಿಚಾರಣೆ ಮುಗಿಸಿ ಕೋರ್ಟ್ ನಿಂದ ಜೈಲಿಗೆ ಕರೆ ತರಬೇಕಾದರೆ 17 ಮಂದಿ ವಿಚಾರಣಾಧೀನ ಕೈದಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಇಬ್ಬರು ಕೈದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, 54 ವಿಚಾರಣಾಧೀನ ಕೈದಿಗಳನ್ನು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿ ವಿಚಾರಣೆ ಬಳಿಕ ಪೊಲೀಸ್ ವಾಹನದಲ್ಲಿ ಅವರನ್ನು ಚೈಬಾಸಾ ಜೈಲಿಗೆ ಕರೆ ತರಲಾಗಿತ್ತು.
ಜೈಲಿನ ಮೊದಲ ಗೇಟ್ ನ ಮೂಲಕ ಆವರಣವನ್ನು ಪ್ರವೇಶಿಸಲಾಯಿತು. ಈ ವೇಳೆ ಕೈದಿಯೊಬ್ಬ ಪೊಲೀಸರ ಮೇಲೆ ಖಾರದ ಪುಡಿ ಎರೆಚಿದ್ದು, 17 ಮಂದಿ ಕೈದಿಗಳು ಮೊದಲ ಗೇಟ್ನ ಮೂಲಕ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಕೈದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿ ಇಬ್ಬರು ಮೃತಪಟ್ಟಿದ್ದು, ಉಳಿದಂತೆ 15 ಮಂದಿ ಪರಾರಿಯಾಗಿದ್ದಾರೆ.
ಕೂಡಲೇ ಕೈದಿಗಳ ಬಂಧನಕ್ಕೆ ತಂಡವನ್ನು ರಚಿಸಿದ್ದು, ಪರಾರಿಯಾಗಿರುವ ಕೈದಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.