ಕೇಂದ್ರ ಗೃಹ ಸಚಿವ ರಾಜನಾಥ್ 
ದೇಶ

'ಕಾಂಗ್ರೆಸ್ಸ್ 10 ವರ್ಷದಲ್ಲಿ ಮಾಡದ್ದನ್ನು ನಾವು 6 ತಿಂಗಳಿನಲ್ಲಿ ಮಾಡಿದ್ದೇವೆ'

ಯಾವುದೇ ಸರ್ಕಾರ, ಅಧಿಕಾರ ಪಡೆದ 6 ತಿಂಗಳಿನೊಳಗಾಗಿ ಇಂತಹ ಸಾಧಾನೆ ಮಾಡಿತೋರಿಸಲಿಲ್ಲ...

ಜಾರ್ಖಂಡ್: ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಸಾಧಿಸಲಾಗದಿದ್ದನ್ನು ಕೇವಲ 6 ತಿಂಗಳಿನಲ್ಲಿ ಬಿಜೆಪಿ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಜಾರ್ಕಂಡ್‌ನ ಬೊಕಾರೋ ಪ್ರದೇಶದಲ್ಲಿ ಆಯೋಜಿಸಿರುವ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಶ್ಲಾಘಿಸಿದರು.

ಕಳೆದ 10 ವರ್ಷಗಳಿಂದ ಭಾರತ ದೇಶವನ್ನು ಆಳಿದ ಕಾಂಗ್ರೆಸ್, ನಾಗರೀಕರ ಮೂಲತಭೂತ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿತ್ತು. ಇದೀಗ ನೂತನವಾಗಿ ಕೇಂದ್ರ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ, ಆಡಳಿತಕ್ಕೆ ಬಂದು 6 ತಿಂಗಳಿನಲ್ಲೇ ತನ್ನ ಸಾಧನೆ ಮಾಡಿ ತೋರಿಸಿದೆ ಎಂದರು.

ಪ್ರಧಾನಿ ಮೋದಿ ನಾಯಕತ್ವದ ಬಳಿಕ ಪೆಟ್ರೋಲ್, ಡಿಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ.

ಜನತೆಯ ಬೇಡಿಕೆಗಳ ಬಗ್ಗೆ ಅರಿವಿದೆ. ಈ ಹಿಂದಿನ ಯಾವುದೇ ಸರ್ಕಾರಗಳು ಅಧಿಕಾರ ಪಡೆದ 6 ತಿಂಗಳಿನೊಳಗಾಗಿ ಇಂತಹ ಸಾಧಾನೆ ಮಾಡಿತೋರಿಸಲಿಲ್ಲ. ಇದೀಗ ಬಿಜೆಪಿ ಕಾರ್ಯಗತದ ಮೂಲಕ ಮಾಡಿ ತೋರಿಸಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT