ಲಂಡನ್: ಮುಸ್ಲಿಮೇತರ ಮಹಿಳೆಯರು ಮತ್ತು ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳವುದು ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಜತೆಗೆ ಲೈಂಗಿಕ ಸಂಪರ್ಕ ಹೊಂದುವುದನ್ನು ಇಸಿಸ್ ಉಗ್ರರ ಪ್ರಕಾರ ತಪ್ಪಲ್ವಂತೆ.
ಇರಾಕ್‌ನ ಮಸೂಲ್ ನಗರದಲ್ಲಿ ಉಗ್ರರು ಹಂಚಿರುವ ಕರಪತ್ರದಲ್ಲಿ ಇಂಥದ್ದೊಂದು ಸಮರ್ಥನೆ ನೀಡಿದ್ದರೆ. ಜತೆಗೆ, ಮುಸ್ಲಿಮೇತರರನ್ನು ಮಾರಾಟ ಮಾಡಬಹುದು ಮತ್ತು ಇತರರಿಗೆ ಉಡುಗೊರೆಯಾಗಿ ಮಾರಾಟ ಮಾಡಬಹುದಂತೆ.
ಈ ಕರಪತ್ರ ನೋಡಿ ನಿವಾಸಿಗಳಿಗೆ ಆಘಾತವಾಗಿದೆ. ಆದರೆ, ಇದಕ್ಕೆ ವಿರೋದ ವ್ಯಕ್ತ ಪಡಿಸುವಂತೆಯೂ ಇಲ್ಲ. ಯಾಕೆಂದರೆ ಹಾಗೊಂದು ವೇಳೆ ವಿರೋಧವೇನಾದರೂ ಮಾಡಿದರೆ ಹತ್ಯೆ ಗೀಡಾಗುವುದು ಖಚಿತ ಎನ್ನು ಭೀತಿ ನಿವಾಸಿಗಳಲ್ಲಿ ಮನೆ ಮಾಡಿದೆ.
ಪತ್ರಕರ್ತರು ಮತ್ತು ನೆರವು ಕಾರ್ಯಕರ್ತರ ತಲೆಕಡಿಯುವ ಕೃತ್ಯವನ್ನೂ ಉಗ್ರರು ಸಮರ್ಥಿಸಿಕೊಂಡಿದ್ದರೆ. ಇದೆಲ್ಲ ದೇವರ ಹೆಸರಿನಲ್ಲಿ ನಡೆಯುವ ಕೃತ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.