ಸೇಡು ತೀರಿಸಿಕೊಳ್ಳುವುದಾಗಿ ಇಸಿಸ್ ಉಗ್ರ ಅಬೌನ್‌ಫಾಲ್ ಅಲ್ಮಾಘ್ರಿಬಿ ಎಚ್ಚರಿಕೆ ನೀಡಿದ್ದಾನೆ. (ಸಂಗ್ರಹ ಚಿತ್ರ) 
ದೇಶ

ಮೆಹ್ದಿ ಬಂಧನ: ಇಸಿಸ್ ಸೇಡಿನ ಎಚ್ಚರಿಕೆ

ಟ್ವೀಟ್ ಉಗ್ರ ಮೆಹ್ದಿ ಬಂಧನಕ್ಕೆ ವಿರುದ್ಧವಾಗಿ ಸೇಡು ತೀರಿಸಿಕೊಳ್ಳುವುದಾಗಿ ಇಸಿಸ್, ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಎಚ್ಚರಿಕೆ ನೀಡಿದೆ.

ಬೆಂಗಳೂರು: ಟ್ವೀಟ್ ಉಗ್ರ ಮೆಹ್ದಿ ಬಂಧನಕ್ಕೆ ವಿರುದ್ಧವಾಗಿ ಸೇಡು ತೀರಿಸಿಕೊಳ್ಳುವುದಾಗಿ ಇಸಿಸ್, ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಎಚ್ಚರಿಕೆ ನೀಡಿದೆ. ಟ್ವಿಟರ್ ಮೂಲಕವೇ ಈ ಕುರಿತು ಇಸಿಸ್ ಉಗ್ರ ಅಬೌನ್‌ಫಾಲ್ ಅಲ್ಮಾಘ್ರಿಬಿ ಎಚ್ಚರಿಕೆ ನೀಡಿದ್ದಾರೆ.

ಅಭಿಷೇಕ್ ಗೋಯಲ್ ಅವರಿಗೆ ರೀಟ್ವೀಟ್ ಮಾಡಿರುವ ಆತ, ನಿಮ್ಮ ಬಂಧನದಲ್ಲಿರುವ ನಮ್ಮ ಸಹೋದರರನ್ನು ನಿಮ್ಮ ಬಳಿಯೇ ಇರಲು ಬಿಡುವುದಿಲ್ಲ. ಇದಕ್ಕೆ ಬದಲಾಗಿ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಕಾದು ನೋಡಿ ಎಂದಿದ್ದಾನೆ. ನಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ನೀವೇ ನೋಡಿ ಎಂದಿದ್ದಾನೆ.

ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ದೇಶದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಟ್ವಿಟರ್ ಖಾತೆದಾರ ಮೆಹ್ದಿಯನ್ನು ಶನಿವಾರ ಬಂಧಿಸಲಾಗಿತ್ತು. ಉಗ್ರನ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಂಧಿಸಿದ್ದರು. ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿಯ ಕೈವಾಡವಿದೆ ಎಂದು ಬ್ರಿಟನ್ ಮೂಲದ ಚಾನೆಲ್ 4' ನ್ಯೂಸ್ ಸುದ್ದಿವಾಹಿನಿ ವರದಿ ಪ್ರಸಾರ ಮಾಡಿತ್ತು.

ಈ ಮೆಹ್ದೀ ಯಾರು?
ಇಸಿಸ್ ಉಗ್ರ ಸಂಘಟನೆಯ ಹೆಸರಲ್ಲಿ ಶಮಿವಿಟ್ನೆಸ್ ಎಂಬ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದೀ ಮೂಲತಃ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಂತೆ. ಸಂಸ್ಥೆಯಲ್ಲಿ ಉನ್ನತ ಹುದ್ದೆ ಹೊಂದಿದ್ದರೂ, ರಹಸ್ಯವಾಗಿ ಇಸ್ಲಾಮಿಕ್ ಸ್ಟೇಟ್ ಪರ ಕೆಲಸ ಮಾಡುತ್ತಿದ್ದನು. 2013ರಲ್ಲಿ ಶಮಿವಿಟ್ನೆಸ್ ಟ್ವಿಟರ್ ಖಾತೆಯನ್ನು ಮೆಹ್ದೀ ತೆರೆದಿದ್ದು, ಜಿಹಾದಿ ಕುರಿತ ಲೇಖನಗಳನ್ನು ಪ್ರಕಟಿಸುವ ಮೂಲಕ ಈ ಖಾತೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು.

ಅಲ್ಲದೆ ಸಿರಿಯಾದ ಬಿಲಾದ್-ಅಲ್-ಶಾಮ್, ಜಿಹಾದಿ, ಆರ್ಥಿಕ ಬಿಕ್ಕಟ್ಟು, ತಂತ್ರಜ್ಞಾನ, ಇತಿಹಾಸಗಳ ಬಗ್ಗೆ ಬರೆಯುತ್ತಿದ್ದನು. ಇದಲ್ಲದೇ ಇರಾಕ್ ಮತ್ತು ಸಿರಿಯಾದಲ್ಲಿ ಆರಂಭಗೊಂಡಿರುವ ಬಿಕ್ಕಟ್ಟಿನ ಕುರಿತಂತೆ ಲೇಖನಗಳನ್ನು ಪ್ರಕಟಿಸುತ್ತಿದ್ದನು ಮತ್ತು ಇಸಿಸ್ ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದನು. ಒಂದು ಮೂಲದ ಪ್ರಕಾರ ಉಗ್ರ ಸಂಘಟನೆಗೆ ಆನ್‌ಲೈನ್ ಮೂಲಕವಾಗಿ ಅತಿದೊಡ್ಡ ಪ್ರಮಾಣದಲ್ಲಿ ಈತನೇ ನೇಮಕಾತಿ ಮಾಡುತ್ತಿದ್ದನು ಎಂದು ಚಾನೆಲ್ 4 ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT