ಅಮಿತಾಬ್ ಬಚ್ಚನ್ 
ದೇಶ

ಮತ್ತೆಂದು ರಾಜಕೀಯಕ್ಕೆ ಕಾಲಿಡಲ್ಲ: ಅಮಿತಾಬ್ ಬಚ್ಚನ್

ರಾಜಕೀಯದಿಂದ ಬಹಳ ವರ್ಷಗಳಿಂದ...

ನವದೆಹಲಿ: ರಾಜಕೀಯದಿಂದ ಬಹಳ ವರ್ಷಗಳಿಂದ ದೂರ ಉಳಿದಿದ್ದ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಾನು ಮತ್ತೆಂದು ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಹೇಳಿದ್ದಾರೆ.

ನಾನು ರಾಜಕೀಯ ಪ್ರವೇಶಿಸಿದ್ದೊಂದು ಅಚಾತುರ್ಯ. ಅಂಥ ತಪ್ಪನ್ನು ಇನ್ನೆಂದು ಮಾಡುವುದಿಲ್ಲ ಎಂದು ಅಮಿತಾಬ್ ಬಚ್ಚನ್ ಅಜೆಂಡಾ ಆಜ್‌ತಕ್ ಕಾರ್ಯಕ್ರಮದಲ್ಲಿ ಶನಿವಾರ ಹೇಳಿದ್ದಾರೆ.

ಈ ಹಿಂದೆ ನಾನು ಸಂಸದನಾಗಿದ್ದೇ ಹಲವು ಕನಸುಗಳನ್ನು ಹೊತ್ತು ರಾಜಕೀಯಕ್ಕೆ ಬಂದೆ. ಆದರೆ ಕನಸುಗಳಿಗೂ ವಾಸ್ತವಕ್ಕೂ ಇರುವ ಸತ್ಯ ರಾಜಕೀಯಕ್ಕೆ ಬಂದ ಮೇಲೆ ಗೊತ್ತಾಯಿತು. ಆಗ ರಾಜಕಾರಣಕ್ಕೆ ಬಂದು ತಪ್ಪು ಮಾಡಿದೆ ಎಂದೆನಿಸಿತ್ತು ಎಂದು 72 ವರ್ಷದ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಆಪ್ತರಾಗಿದ್ದ ಅಮಿತಾಬ್ ಬಚ್ಚನ್, 1984ರಲ್ಲಿ ಅಲಹಾಬಾದ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಬಳಿಕ ಮೂರು ವರ್ಷಗಳಲ್ಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮತ್ತೆ ರಾಜಕಾರಣಕ್ಕೆ ಬರುವ ಬಗ್ಗೆ ಅನಾಸಕ್ತರಾಗಿರುವ ಅವರು ಮತ್ತೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video