ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಕೆಫೆಯೊಂದರ ಮೇಲೆ ದಾಳಿ ಮಾಡಿ 50 ಮಂದಿಯನ್ನು ಒತ್ತೆಯಾಳಗಿಟ್ಟುಕೊಂಡಿದ್ದ ಉಗ್ರರಿಂದ ಐವರು ಪಾರಾಗಿದ್ದಾರೆ.
ಉಗ್ರರ ಕಣ್ಣು ತಪ್ಪಿಸಿ ಇಬ್ಬರು ನಾಗರಿಕರು ಮತ್ತು ಓರ್ವ ಕೆಫೆ ಸಿಬ್ಬಂದಿ ತುರ್ತು ನಿರ್ಗಮನದಿಂದ ಹೊರ ಬಂದಿದ್ದರು. ಇದರ ಬೆನ್ನಲ್ಲೇ ಇಬ್ಬರು ಮಹಿಳಾ ಸಿಬ್ಬಂದಿಗಳು ತುರ್ತು ನಿರ್ಗಮನದಿಂದ ಹೊರಬಂದಿದ್ದಾರೆ.
ಹೊರ ಬಂದ ಐವರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು, ಉಗ್ರರ ವೇಷ ಮತ್ತು ಕೆಫೆಯೊಳಗಿನ ಪರಿಸ್ಥಿತಿ ಸೇರಿದಂತೆ ಇತರ ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಗ್ರರು ಪ್ರಧಾನಿ ಟೋನಿ ಅಬೋಟ್‌ರೊಂದಿಗೆ ಮಾತುಕತೆಗೆ ಪಟ್ಟು ಹಿಡಿದಿದ್ದು, ಕೆಫೆಯಲ್ಲಿದ್ದ ನಾಗರಿಕರನ್ನು ಒತ್ತೆಯಾಳಗಿಟ್ಟುಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಟೋನಿ ಅಬೋಟ್, ದೇಶದಲ್ಲಿ ಜನತೆ ಶಾಂತಿಯಿಂದಿರಬೇಕು. ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.